ಯಲ್ಲಾಪುರ :ತಾಲೂಕಿನ ಕಳಚೆಯಲ್ಲಿ
ಗುರುವಾರ ರಾತ್ರಿ ಗುಡ್ಡ ಕುಸಿದು ಮನೆಯೊಳಗೆ ಬಿದ್ದಿದೆ. ಆರ್. ವಿ. ಭಟ್ ಹೊಸ ಕುಂಬ್ರಿ ಎಂಬುವವರ ಮನೆಯ ಹಿಂಬದಿಯ ಸುಮಾರು ಒಂದು ಎಕರೆ ಅಡಿಕೆ ತೋಟ 2 ನೆಡುತೋಪು ನೆಲಸಮವಾಗಿದೆ.
ಮನೆಗಳಿಗೆ ಬರುವ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಇನ್ನು ಮನೆ ಕುಸಿಯುವ ಆತಂಕವಿದ್ದು,ಜೀವನ ಭಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸಮೀಪದಲ್ಲಿ ಹರಿಯುತ್ತಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಗುಡ್ಡದಿಂದ ನೀರು ಹರಿದುಬರುತ್ತಿದೆ. ಇದರಿಂದ ಮತ್ತಷ್ಟು ಆತಂಕ ಮೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಳಚೆಯ ನಾರಾಯಣ ಎನ್ನುವವರ ಮನೆಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮಹಿಳೆಯೊಬ್ಬರು ಮನೆಯಲ್ಲಿ ಸಿಲುಕಿಕೊಂಡಿರಬಹುದುಎನ್ನಲಾಗುತ್ತಿದೆ. ಮಕ್ಕಳನ್ನು ರಕ್ಷಿಸಲಾಗಿದೆ ಹಾಗೂ ಪಿ. ಜಿ ಹೆಗಡೆ ದನದ ಕೊಟ್ಟಿಗೆಯ ಸಂಪೂರ್ಣ ನೆಲಸಮವಾಗಿದ್ದು ಜಾನವಾರು ಸಿಲುಕಿಕೊಂಡು ಅಸುನೀಗಿದೆ.
Leave a Comment