ಬೆಂಗಳೂರು : ಕರ್ನಾಟಕ ರಾಜ್ಯದ ನೂತನ ಮುಖ್ಯಂಮತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಪ್ರತಿಜ್ಙಾವಿಧಿ ಸ್ವೀಕರಿಸಿದ್ದಾರೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಅಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಯಾಣ ವಚನ ಸ್ವೀಕರಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಮೊದಲ ದಿನವೇ ಹೊಸ ಘೋಷಣೆಗಳನ್ನು ಮಾಡಿರುವ ಬಸವರಾಜ ಬೊಮ್ಮಾಯಿ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರು. 1 ಸಾವಿರ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರೈತರ ಮಕ್ಕಳ ಕಲಿಕೆಯಿಂದ ವಂಚಿತರಾಗಬಾರದು ಹೀಗಾಗಿ ಶಿಷ್ಯ ವೇತನ ಜಾರಿ ಮಾಡಲಾಗುವುದು ಎಂದಿದ್ದಾರೆ.

ಸAಧ್ಯಾ ಸುರಕ್ಷಾ, ವಿಧವಾ ವೇತನ ಅಂಗವಿಕಲ ವೇತನದಲ್ಲಿ ಹೆಚ್ಚಳ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1 ಸಾವಿರ ರು.ನಿಂದ 1200 ರುಗೆ ಹೆಚ್ಚಳ ಮಾಡಲಾಗುವುದು ವಿಧವಾ ವೇತನ ಹಾಲಿ 600 ರು. ಇದ್ದು ಅದನ್ನು 800 ರು.ಗೆ ಏರಿಕೆ ಆಗಲಿದೆ.
ಮಣ್ಣಿನ ಮಕ್ಕಳ ಉನ್ನತ ಶಿಕ್ಷಣಕ್ಕೆ 1000 ಕೋಟಿ ರು. ವಿದ್ಯಾರ್ಥಿ ವೇತನ
ಮುಖ್ಯಮಂತ್ರಿಯಾಗಿ ಮೊದಲ ದನವೇ ಹೊಸ ಘೋಷಣೆಗಳನ್ನು ಮಾಡಿರುವ ಬಸವರಾಜ ಬೊಮ್ಮಾಯಿ ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹ ನೀಡುವ ಸಲುವಾಗಿ ರು.1 ಸಾವಿರ ಕೋಟಿ ಹೆಚ್ಚುವರಿ ಅನಿದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರೈತರ ಮಕ್ಕಳ ಕಲಿಕೆಯಿಂದ ವಂಚಿತರಾಗಬಾರದು. ಹೀಗಾಗಿ ಶಿಷ್ಯ ವೇತನ ಜಾರಿ ಮಾಡಲಾಗುವುದು ಎಂದಿದ್ದಾರೆ.
Leave a Comment