ಹೊನ್ನಾವರ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಾದ ಅಡಿಕೆ ತೆಂಗು ಬಾಳೆ ಸಸಿಗಳಿಗೆ ಕಾಡುಹಂದಿಯಿಂದ ಉಂಟಾಗುವ ಹಾನಿ ಹಿನ್ನಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಕಿಸಾನ್ ಸಂಘದ ಮಾಳ್ಕೋಡ್ ಘಟಕದಿಂದ ಮನವಿ ಸಲ್ಲಿಸಿದರು.
ಕಳೆದ ಕೆಲವು ವರ್ಷಗಳಿಂದ ಕಾಡುಹಂದಿಗಳೂ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸಿ ಅಡಿಕೆ, ತೆಂಗು ಬಾಳೆ, ವಿಳ್ಳದೆಲೆ ಬಳ್ಳಿಗಳನ್ನು ಹಾನಿ ಮಾಡುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಂದ ರೈತನಿಗೆ ಆದಾಯಕ್ಕಿಂತ ನಷ್ಟವೇ ಅಧಿಕವಾಗಿದೆ. ಇನ್ನೊಂದಡೆ ಮಂಗಗಳ ಕಾಟ ವಿಪರೀತವಾಗಿದ್ದು, ತೆಂಗಿನಕಾಯಿ ದಿನನಿತ್ಯದ ಉಪಯೋಗಕ್ಕೆ ಸಿಗುತ್ತಿಲ್ಲ.

ಕೋರೋನಾ ಸಂಕಷ್ಟದ ಸಮಯಲ್ಲಿ ವಿಳ್ಯದೆಲೆ ಮಾರಾಟ ಬಂದಾಗಿದ್ದು ಇನ್ನು ಚೇತರರಿಕೆ ಕಂಡಿಲ್ಲ. ಈಗ ಬಳ್ಳಿಯನ್ನು ಹಂದಿ ನಾಶದಿಂದ ಬಹಳಷ್ಟು ವಿಳ್ಯದೆಲೆ ನಾಶ ಹೊದುತ್ತಿದೆ. ಅಡಿಕೆಗೆ ಕೊಳೆರೋಗ ಹಾಗೂ ಇನ್ನಿತರ ಬಾದೆಯಿಂದ ಇಳೂವರಿ ಕಡಿಮೆಯಾಗುತ್ತಿದ್ದು, ಮುಂದಿನ ದಿನದಲ್ಲಿ ಈ ಬೆಳೆಗೆ ಗಿಡ ಬೆಳೆಸಲು ಮುಂದಾದಲ್ಲಿ ಕಾಡುಪ್ರಾಣಿಗಳು ನಾಶ ಮಾಡುತ್ತಿದೆ. ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಬೆಳೆಹಾನಿಯಾದ ತಾಲೂಕಿನ ವಿವಿಧ ಭಾಗದ ರೈತರ ವಿವರದೊಂದಿಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೊರಯ್ಯ ಮನವಿ ಸ್ವೀಕರಿಸಿದರು.
ಗಣಪತಿ ಹೆಗಡೆ ಮಾತನಾಡಿ ಕಾಡುಹಂದಿ ಹಾಗೂ ಮಂಗಗಳಿಂದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುತ್ತಿದೆ. ಪರಿಹಾರ ಹಾಗೂ ಪ್ರಾಣಿಗಳ ನಿಯಂತ್ರಣದ ಕುರಿತಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಸೂಕ್ತ ದಾಖಲೆ ನೀಡುವಂತೆ ತಿಳಿಸಿದ್ದಾರೆ.
ಅರಣ್ಯದಲ್ಲಿ ಹಣ್ಣಿನ ಗಿಡ ಬೆಳೆಸಿದರೆ, ಈ ಪ್ರಾಣಿ ನಿಯಂತ್ರಣದ ಬಗ್ಗೆ ತಿಳಿಸಿದ್ದು ಅಧಿಕಾರಿಗಳು ಸಮ್ಮತಿಸಿದ್ದಾರೆ ಎಂದರು.
ಅಧಿಕಾರಿಗಳೊಂದಿಗೆ ಚರ್ಚಿಸಿದ ಕೆ.ಟಿ.ಬೊರಯ್ಯ ಮಾತನಾಡಿ ತೋಟಗಾರಿಕಾ ಬೆಳೆ ಹಾನಿಗೆ ಸಂಭದಿಸಿದಂತೆ ಈ ಪರಿಹಾರ ಆಪ್ ಮೂಲಕ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಂ.ಆರ್.ಹೆಗಡೆ, ಡಿ.ಎಂ.ನಾಯ್ಕ, ಗಜಾನನ ಹೆಗಡೆ, ಗಣೇಶ ಹೆಗಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸೂಳಗಾರಿನಲ್ಲಿ ತೋಟದ ಮೇಲೆ ಗುಡ್ಡ ಕುಸಿದು ಹಾನಿ
Leave a Comment