ಹೊನ್ನಾವರ ತಾಲೂಕಿನ ಕರ್ಕಿನಾಕ ಬಳಿ ಇರುವ ಸುಜಕಿ ಶೊರೂಮ್ ಸಮೀಪದಲ್ಲಿ ರಸ್ತೆಗೆ ಕಬ್ಬಿಣದ ಪೈಪು ಅಳವಡಿಸಿದ್ದರು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯುವಕನ ಕಾಲು ಆಕಸ್ಮಿಕವಾಗಿ ಕಬ್ಬಿಣದ ಪೈಪಿಗೆ ಸಿಕ್ಕಿಹಾಕಿಕೊಂಡಿತ್ತು.
ರಾತ್ರಿ ಸಮಯವಾಗಿರುದರಿಂದ ಜನಸಂಚಾರವು ವಿರಳವಾಗಿತ್ತು. ಸ್ಥಳಿಯರು ಇದನ್ನು ಗಮನಿಸಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸಂಕಷ್ಟದಲ್ಲಿದ್ಸ ನವೀನ್ ರಘುನಾಥ್ ಭಂಡಾರಿ ಎನ್ನುವ ಯುವಕನಿಗೆ ಧೈರ್ಯ ಹೇಳಿ ಅಗ್ನಿಶಾಮಕ ರಕ್ಷಣಾ ಉಪಕರಣಗಳ ಸಹಾಯದಿಂದ ಹಾಗೂ ಸ್ಥಳೀಯ ಯುವಕರ ಸಹಾಯದಿಂದ ಪೈಪ್ಅನ್ನು ಕಟಿಂಗ್ ಮಷಿನ ಯಿಂದ ಕಟ್ ಮಾಡಿ ಪೈಪ್ ಒಳಗಡೆ ಸಿಕ್ಕಿಕೊಂಡಿರುವ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇಲಾಖೆಯ ಸಿಬ್ವಂದಿಗಳ ಸಮಯೋಚಿತ ಸ್ಪಂದನೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ವೇಳೆ ಪ್ರಭಾರ ಠಾಣಾಧಿಕಾರಿ ಅರುಣ ಎಸ್ ಮಾಳೋದೆ ಸಿಬ್ಬಂದಿಗಳಾದ ಗುರುನಾಥ ನಾಯ್ಕ, ನಾಗೇಶ್ ಪೂಜಾರಿ ,ಕನ್ನೇ ಗೌಡ , ಬಸವರಾಜ್ ಮ್ಯಾಂಗೋಜಿ ಅಭಿಷೇಕ ನಾಯ್ಕ, ಗಣಪತಿ ಪಟಗಾರ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

Leave a Comment