ಹೊನ್ನಾವರ: ತಾಲೂಕಿನ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ಸುಧಿರ್ಘ ಅವಧಿ ಸೇವೆ ಸಲ್ಲಿಸಿÀ ನೀವೃತ್ತರಾದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ಇವರಿಗೆ ಸೂಸೈಟಿ ಆವರಣದಲ್ಲಿ ಗೌರವಯುತವಾಗಿ ಬಿಳ್ಕೋಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ದಿನಕರ ಶೆಟ್ಟಿ ಮಾತನಾಡಿ ಜೇನು ಸೊಸೈಟಿ ಬಾಗಿಲು ಮುಚ್ಚುವ ಹಂತದಲ್ಲಿ ಸಂಸ್ಥೆಯನ್ನು ಆರ್ಥಿಕ ಲಾಭದತ್ತ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲು ಶ್ರೀಧರ ಹೆಗಡೆಯವರು ಮುಂಚೂಣಿ ಪಾತ್ರ ವಹಿಸಿದ್ದರು.
ಇವರ ಪ್ರಯತ್ನದ ಫಲವಾಗಿ ಅಲ್ಲದೇ ಹೊನ್ನಾವರದ ಜೇನುತುಪ್ಪ ಕೀರ್ತಿಯು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಸರಿಸಿದೆ. ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಸೇವೆ ನೀಡಿರುದಕ್ಕೆ ಇಂದು ನಾವೆಲ್ಲರೂ ಸೇರಿ ಗೌರವಿಸುತ್ತಿದ್ದೇವೆ. ನಿವೃತ್ತಿ ನಂತರದ ಜೀವನಕ್ಕೆ ಶುಭಹಾರೈಸಿದರು.

ಜೇನು ಸೊಸೈಟಿ ಸೇರಿದಂತೆ ವಿವಿಧ ಸಂಘಟನೆಯ ಪ್ರಮುಖರು ಶ್ರೀಧರ ಹೆಗಡೆ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಶ್ರೀಧರ ಹೆಗಡೆ ಮಾತನಾಡಿ ಪ್ರತಿಯೊಂದು ವೃತ್ತಿಯಲ್ಲಿ ನಿವೃತ್ತಿ ಸಹಜ. 36 ವರ್ಷಗಳ ಸುಧಿರ್ಘ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿರುವುದು ಸಂತಸ ಮೂಡಿಸಿದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಂಘ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಮುಂದಿನ ದಿನದಲ್ಲಿ ಇದರ ಕೀರ್ತಿ ಇನ್ನಷ್ಟು ಹೆಚ್ಚಲಿ. ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್.ಭಟ್, ಜೇನು ಸಾಕಾಣಿದಾರರ ಮಾಜಿ ಅಧ್ಯಕ್ಷರು ಹಿರಿಯ ಪತ್ರಕರ್ತರಾದÀ ಜಿ.ಯು.ಭಟ್, ಟಿ.ಎ.ಪಿ.ಸಿ.ಎಮ್.ಎಸ್ ನಿರ್ದೇಶಕರಾದ ಚಂದ್ರಶೇಖರ ಗೌಡ ಸೇರಿದಂತೆ ವಿವಿಧ ಗಣ್ಯರು ಶ್ರೀಧರ ಹೆಗಡೆಯವರೊಂದಿಗಿನ ಒಡನಾಟ ಹಾಗೂ ಸಂಘಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಶ್ವನಾಥ ಭಟ್ ವಹಿಸಿದ್ದರು
ಸಂಘದ ನಿರ್ದೇಸಕಾರ ರವಿ ಶೆಟ್ಟಿ ಕವಲಕ್ಕಿ ಸೇರಿದಂತೆ ವಿವಿಧ ಇಲಾಖರಯ ಅಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು. ಚೇತನಾ ಭಟ್ ಪ್ರಾರ್ಥಿಸಿ ರವಿಂದ್ರ ಭಟ್ ಸ್ವಾಗತಿಸಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Honvar news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ. Whatsapp group join ಆಗಿ ;https://chat.whatsapp.com/G9SxG7l3Wo36m72c85bSOA
Leave a Comment