ಯಲ್ಲಾಪುರ: ತಾಲೂಕಿನಲ್ಲಿ ಕಳೆದವಾರ ಸುರಿದ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ಸೋಮವಾರಸಂಜೆ ಪ್ರತಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಳ್ಳಾಪುರ ಭಾಗದಲ್ಲಿ ನರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೊಚ್ಚಿ ಹೋದ ಗುಳ್ಳಾಪುರ ಸೇತುವೆ ಯನ್ನು ಪರಿಶೀಲಿಸಿದರು

.ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಪಕ್ಷದ ನಾಯಕನಾಗಿ ರಾಜ್ಯಾದ್ಯಂತ ನೆರೆಪೀಡಿತ ಪ್ರದೇಶಗಳಿಗೆ ಭೆಟಿ ನೀಡಿದ್ದೇನೆ ಎಲ್ಲ ಕಡೆಯ ಹಾನಿಯ ಮಾಹಿತಿ ಪಡೆದಿದ್ದೇನೆ ಅದನ್ನು ಕ್ರೂಡಿಕರಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ.ಶೀಘ್ರವಾಗಿ ಪರಿಹಾರೋಪಾಯ ನೀಡುವಂತೆ ಸದನದಲ್ಲಿಯೂ ದನಿ ಎತ್ತುತ್ತೇನೆ ಸರಕಾರದ ಗಮನ ಸೆಳೆಯುತ್ತೇನೆ. ಸರಕಾರ ತನ್ನಕರ್ಚಿ ಉಳಿಸಿಕೊಳ್ಳುವದಕ್ಕಾಗಿಯೇ ಸಮಯ ವ್ರ್ಥ ಮಾಡುತ್ತಿದೆ. ನಮ್ಮ ಸರಕಾರವಿರುವಾಗ ಜನ ನೆಮ್ಮದಿಯಿಂದ ಇದ್ದರು.ಇನ್ನೇರಡು ವರ್ಷ ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್,ವಿ ದೇಶಪಾಂಡೆ, ಮಾಜಿ ಶಾಸಕ ಸತೀಶ ಸೈಲ್, ಜಿಲ್ಲಾಧ್ಯಕ್ಷ ಭೀಮಣ್ಣಾ ನಾಯ್ಕ, ಪ್ರಮುಖರಾದ ಶಂಭು ಶೆಟ್ಟಿ ,ಪ್ರಶಾಂತ ಧೇಶಪಾಂಡೆ, ಸುಷ್ಮಾ ರಾಜಗೋಪಾಲ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಿ.ಎನ ಗಾಂವ್ಕರ, ರವಿ ನಾಯ್ಕ, ಪ್ರಶಾಂತ ಸಭಾಹಿತ,ಅನಿಲ ಮರಾಠೆ, ಕೈಸರ್ ಅಲಿ,ಪೂಜಾ ನೇತ್ರೆಕರ ಮುಂತಾದರು ಇದ್ದರು.
Yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ
https://chat.whatsapp.com/D0Ry5Povwke1s77ibSLq4A
Leave a Comment