ನವದೆಹಲಿ : ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ ರುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವಾ ಇಲಾಖೆ ಹಾಗೂ ರಾಷ್ಟಿçÃಯ ಪಾವತಿ ನಿಗಮವು ಈ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಈರುಪಿ ಪಾವತಿ ವ್ಯವಸ್ಥೆ ನಗದು ರಹಿತ ಹಾಗೂ ನೇರ ಸಂಪರ್ಕ ಡಿಜಿಟಲ್ ಮಾಧ್ಯಮವಾಗಿದೆ. ಎಸ್ ಎಂ ಎಸ್ ಸ್ಟಿçಂಗ್ ಅಥವಾ ಕ್ಯೂ ಆರೆ ಮಾದರಿ ರೂಪದಲ್ಲಿ ಫಲಾನುಭವಿಗಳ ಮೊಬೈಲ್ ಪೋನ್ಗೆ ರವಾನೆಯಾಗುತ್ತದೆ. ಇದೊಂದು ಮೊದಲೇ ಪಾವತಿಸಿರುವ ಉಡಗೊರೆ ವೋಚರರ್ನಂತಿದೆ. ಯಾವುದೇ ಡೆಬಿಟ್ – ಕ್ರೆಡಿಟ್ ಕಾರ್ಡ, ಮೊಬೈಲ್ ಆಪ್ ಅಥವಾ ಇಂಟರ್ನ್ಟ್ ಬ್ಯಾಂಕಿAಗ್ ಇಲ್ಲದೇ ನಿರ್ದಿಷ್ಟ ಸ್ವೀಕೃತಿ ಕೇಂದ್ರದಲ್ಲಿ ನಗದೀಕರಿಸಲು ಸಾಧ್ಯವಿದೆ. ಇದು ಫಲಾನುಭವಿಗಳು ಹಾಗೂ ಸೇವಾ ಒದಗಣೆದಾರರೊಂದಿಗೆ ಸೇವಾ ಪ್ರಯೋಜಕರ ಸಂಪರ್ಕ ಕಲ್ಪಿಸುತ್ತದೆ.

ಸರ್ಕಾರ ಅಥವಾ ಯಾವುದೇ ಒಔದ್ಯಮಿಕವಲಯವು ಇ ರುಪಿ ಪಾವತಿ ವ್ಯವಸ್ಥೆಯೊಂದಿಗೆ ಕೈಜೋಡಿಸಿರುವ ಖಾಸಗಿ ಅಥವಾ ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ಸಂಪರ್ಕಿಸಿ ನಿರ್ದಿಷ್ಟ ವ್ಯಕ್ತಿಯ ವಿವರಗಳು ಹಾಗೂ ಪಾವತಿಯ ಉದ್ದೇಶವನ್ನು ತಿಳಿಸಬೇಕು. ಫಲಾನುಭವಿಗಳಿ ತಮ್ಮ ಮೊಬೈಲ್ ಸಂಖ್ಯೆಯ ಮೂಲಕ ಗುರುತಿಸಲ್ಪಡುತ್ತಾರೆ. ಬ್ಯಾಂಕುಗಳು ವೋಚರ್ ನೀಡುವುದರೊಂದಿಗೆ ಸೂಚಿತ ವ್ಯಕ್ತಿಗೆ ಹಣ ಪಾವತಿಯಾಗುತ್ತದೆ.
ಇ ರುಪಿ ಮೂಲಕ ಕಲ್ಯಾಣಕಾರ್ಯಕ್ರಮಗಳ ಫಲಾನುಭವಿಗಳಿಗೆ ದೋಷರಹಿತ ಹಣ ಪಾವತಿಯಾಗುದನ್ನು ನಿರೀಕ್ಷಿಸಲಾಗುತ್ತದೆ. ತಾಯಂದಿರು ಹಾಗೂ ಮಕ್ಕಳ ಕಾರ್ಯಕ್ರಮಗಳಡಿ ಬರುವ ಔಷಧಗಳು ಹಾಗೂ ಪೌಷಿಕಾಂಶ, ಆಯುಷ್ಮಾನ ಭಾರತ್ ಪ್ರಧಾನ ಮಂತ್ರಿ ಜನಾರೊಗ್ಯ ಯೋಜನೆಗೆ ಸಂಬAದಿಸಿದ ನೆರವು ಮತ್ತು ರಸಗೊಬ್ಬರ ಸಬ್ಸಿಡಿ ಒದಗಿಸುವ ದಿಸೆಯಲ್ಲಿ ಇ ರೂಪಿ ಅನೂಕೂಲವಾಗಲಿದೆ. ಇದಲ್ಲದೆ ಖಾಸಗಿ ಕಂಪನಿಗಳು ತಮ್ಮ ನೌಕರರ ಕಲ್ಯಾಣ ಕಾರ್ಯಗಳು ಔದ್ಯಮಿಕ ಸಾಮಜಿಕ ಹೊಣೆಗಾರಿಕೆಗೆ ಇ ರೂಪಿ ಮೂಲಕ ಹಣಕಾಸು ನೆರವು ನೀಡಬಹುದು ಎಂದು ಸರ್ಕಾರ ಹೇಳಿದೆ.
ಸರ್ಕಾರ ಈಗಾಗಲೇ ಸೆಂಟ್ರಲ್ ಟಿಜಿಟಲ್ ಕರೆನ್ಸಿ ಅಭಿವೃದ್ಧಿಪಡಿಸುವತ್ತ ಕಾರ್ಯೋನ್ಮುಖವಾಗಿದೆ. ಭವಿಷ್ಯದ ಟಿಜಿಟಲ್ ಕರೆನ್ಸಿ ಯಶಸ್ವಿಯಾಗಲಿದೆ. ಇ ರೂಪಿಯ ಭವಿಷ್ಯವು ಜನಸಾಮಾನ್ಯರು ಇದನ್ನು ಅತಿಹೆಚ್ಚು ಬಳಕೆ ಮಾಡುವುದರ ಮೇಲೆ ಅವಲಂಬಿಸಿದೆ.
Leave a Comment