ದುಬಾರಿ ಚುಚ್ಚುಮದ್ದು ಪಡೆದಿದ್ದ ಹಸುಳೆ ಸಾವು

ನವದೆಹಲಿ : ಸ್ಪೈನಲ್ ಮಸ್ಕುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯ ಚಿಕಿತ್ಸೆಗಾಗಿ 16 ಕೋಟಿ ರೂ.ಗಳ ದುಬಾರಿ ಚುಚ್ಚುಮದ್ದು ಪಡೆದಿದ್ದ ಮಹಾರಾಷ್ಟçದ ಪುಣೆಯ 11 ತಿಂಗಳ ಮಗು ವೇದಿಕಾ ಚಿಕಿತ್ಸೆ ಫಲಿಸದೆ. ಸಾವನ್ನಪ್ಪಿದ್ದಾಳೆ. ಎಸ್‌ಎಂಎ ಚಿಕಿತ್ಸೆಗೆ ಈ ನತದೃಷ್ಟ ಮಗುವಿಗೆ ಜೂನ್ ತಿಂಗಳಲ್ಲಿ 16 ಕೋಟಿ ಮೌಲ್ಯದ ಇಂಟ್ರಾವೆನ್ಸ್ ಇಂಜೆಕ್ಷನ್ ಜೀನ್ ಥೆರಪಿ ಚುಚ್ಚುಮದ್ದು ಕೊಡಲಾಗಿತ್ತು. ಭಾರತದಲ್ಲಿ ಈ ದುಬಾರಿ ಇಂಜೆಕ್ಷನ್ ಉತ್ಪಾದನೆಯಾಗದ ಕಾರಣ ಅಮೆರಿಕದಿಂದ ತರಿಸಿಕೊಳ್ಳಲಾಗಿತ್ತು.