ಹೊನ್ನಾವರ: ತಾಲೂಕಿನಲ್ಲಿ ಕೋವಿಡ್ ವಾಕ್ಸಿನೇಷನ್ ಪಡೆಯಲು ಸಾರ್ವಜನಿಕರು ಕೋವಿಡ್ ಭಯ ಮರೆತು ಗುಂಪುಗುಂಪಾಗಿ ಆಗಮಿಸಿ ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂತು. ಬಹುದಿನಗಳಿಂದ ನೂರು ಎರಡುನೂರು ಲಸಿಕೆ ಬಂದು ವಿತರಣೆಯಾಗುತ್ತಿತ್ತು. ಸೋಮವಾರ 2500 ಲಸಿಕೆ ಹಾಕುವ ಯೋಜನೆ ಇಲಾಖೆ ತೋರಿ ವಿವಿಧ ಭಾಗಗಳೀಗೆ ಹಂಚಿಕೆ ಮಾಡಿತ್ತು.
ತಾಲೂಕಾ ಆಸ್ಪತ್ರೆಯಲ್ಲಿ-200. ಪಟ್ಟಣ ವ್ಯಾಪ್ತಿಯಲ್ಲಿ-400. ಅಲ್ಲದೆ ಗ್ರಾಮೀಣ ಪ್ರದೇಶವಾದ ಹಳದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200. ಕಡತೋಕಾ ಆರೋಗ್ಯ ಕೇಂದ್ರದಲ್ಲಿ-200. ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200. ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200. ಶಂಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200. ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200. ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-300.
ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 400 ಜನರಿಗೆ ಲಸಿಕೆ ವಿತರಿಸಲಾಯಿತು. ಎಲ್ಲಾ ಕಡೆಗಳಲ್ಲಿ ಶೇಕಡಾ 50 ರಷ್ಟು ಪ್ರಥಮ ಡೋಸ್ ಹಾಗೂ ಶೇಕಡಾ 50 ರಷ್ಟು ಎರಡನೇ ಡೋಸ್ ವಿತರಿಸುವ ವಿಷಯ ತಿಳಿದ ಈ ಭಾಗದ ಸಾರ್ವಜನಿಕರು ಮುಂಜಾನೆ 6 ಘಂಟೆಗೆ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಕೊಂಡರು. ಟೋಕನ್ ಪಡೆಯುವಾಗ ಮರೆರತ ಸಾಮಾಜಿಕ ಅಂತರ ಟೋಕನ್ ದೊರೆತು ಲಸಿಕೆ ತೆಗೆದುಕೊಳ್ಳುವಾಗಲು ಸರಿಪಡಿಸಲು ಸಾಧ್ಯವಾಗಿಲ್ಲ. ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹೈರಾಣರಾದರು.
Leave a Comment