
ಯಲ್ಲಾಪುರ:ಬಹುದೀರ್ಘ ಕಾಲದವರೆಗೆ ಕಾಂಗ್ರೆಸ್ ಸರಕಾರದ ಆಡಳಿತಇದ್ದರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ದೇಶಪಾಂಡೆಯವರು ೨೩ ವರ್ಷಕ್ಕಿಂತ ಅಧಿಕ ಅವಧಿಯಲ್ಲಿ ಜಿಲ್ಲಾ ಸಚಿವರಾಗಿ ಏನು ಕೊಡುಗೆ ನೀಡದ ಹತಾಶೆಗೊಂಡು ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಗನಿಗೆ ರಾಜಕೀಯ ಮರುಹುಟ್ಟು ನೀಡುವ ಉದ್ದೇಶದಿಂದ ಕಾರವಾರ ಮತ್ತು ಯಲ್ಲಾಪುರದಲ್ಲಿ ಕೇವಲ ಕಷ್ಟದಲ್ಲಿದ್ದ ಜನರಿಗೆ ಸ್ಪಂದಿಸುವ ನೆಪವೊಡ್ಡಿ, ನೆರಪೀಡಿತರಾಗಿರುವ ಸರ್ಕಾರವೆಂದು ಹೇಳಿದ್ದನ್ನು ,ಸರ್ಕಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿರುವುದನ್ನು ಜಿಲ್ಲಾ ಬಿಜೆಪಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮತ್ತು ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.
ಅವರು ಮಂಗಳವಾರ ಪಟ್ಟಣದ ಎಪಿಎಂಸಿ ಆವಾರದ ಅಡಕೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ನಮ್ಮ ಪಕ್ಷದ ಸಚಿವ ಶಿವರಾಮ ಹೆಬ್ಬಾರ ಇರಲಿ, ಶಾಸಕರಿರಲಿ, ಪಕ್ಷದ ಯಾವುದೇ ಪದಾಧಿಕಾರಿಗಳು ಕೂಡ ಜನಸಾಮಾನ್ಯರ ಬದುಕಿಗೆ, ಆಪತ್ತಿನಲ್ಲಿ ಸಿಲುಕಿದವರಿಗೆ ನಿರೀಕ್ಷೆ ಮೀರಿ ಸಹಾಯ ಮಾಡುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಉತ್ತರಕನ್ನಡದ ಭೀಕರ ಪ್ರವಾಹ ಕುರಿತು ಅರಿತ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಬಂದು ಪ್ರವಾಹದಿಂದ ಕೊಚ್ಚಿಹೋದ ಜಿಲ್ಲೆಯ ಸ್ಥಿತಿಗತಿಯ ಪರಿಶೀಲನೆ ನಡೆಸಿ, ೨೦೦ ಕೋಟಿ ರೂ.ಹಣ ಮಂಜೂರಿ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ತೀವ್ರ ಹಾನಿಯಾದ ಜಿಲ್ಲೆಯ ಪರಿಸ್ಥಿತಿ ಅವಲೋಕನಕ್ಕಾಗಿ ಮುಖ್ಯಮಂತ್ರಿಗಳನ್ನು ಶಿವರಾಮ ಹೆಬ್ಬಾರ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಸೇರಿ ಕರೆತಂದಿದ್ದಾರೆ. ಹಾಗೆಯೇ ಜನರ ಸಂಕಷ್ಟಕ್ಕೆ ನಮ್ಮ ಪಕ್ಷದ ಕೆಳಹಂತದ ಕಾರ್ಯಕರ್ತರಿಂದ ಶಾಸಕರಾದಿಯಾಗಿ ಸಚಿವರವರೆಗೂ ತೀವೃಗತಿಯಲ್ಲಿ ಸ್ಪಂದಿಸುತ್ತಿದ್ದಾರೆ.
ಸೀಬರ್ಡ್ ನಿರಾಶ್ರಿತರಿಗೆ ೩೦ ವರ್ಷಗಳಿಂದ ಸಮರ್ಪಕ ಪರಿಹಾರ ನೀಡದೇ, ದೇಶಪಾಂಡೆ ತೀವ್ರ ಅನ್ಯಾಯವೆಸಗಿದ್ದಾರೆ. ಇನ್ನು ಅವರೆಲ್ಲ ಸಂಕಷ್ಟದಲ್ಲಿದ್ದಾರೆ. ಬೇರೆಯವರ ಕುರಿತು ಮಾತನಾಡುವ ದೇಶಪಾಂಡೆ, ಜಿಲ್ಲೆಯ ಜನತೆಗೆ ಏನು ಕೊಡುಗೆ ನೀಡಿದ್ದಾರೆ. ? ಒಂದು ಆಸ್ಪತ್ರೆಯನ್ನೂ ಸಹಿತ ಮಾಡಲಾಗಿಲ್ಲ. ಇಂತಹ ಹಿರಿಯ ನಾಯಕರಾದ ಅವರು, ಹಳಿಯಾಳದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತ ಪಕ್ಷದ ಮುಖಂಡರಾದ ಘೋಟ್ನೇಕರ್ ಇವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಗನಿಗೆ ರಾಜಕೀಯ ಜನ್ಮ ನೀಡಲು ಮುಂದಾಗಿದ್ದಾರೆ.
ಅದರಬದಲು ಶಾಸಕರಾದ ಅವರು, ಮುಖ್ಯಮಂತ್ರಿ ಆಗಮಿಸಿದಾಗ ಜಿಲ್ಲೆಯ ಸ್ಥಿತಿ ಕುರಿತು ತಾವು ಭಾಗವಹಿಸಿ, ಅವರಿಗೆ ಮನವಿ ನೀಡಿ, ಹೆಚ್ಚಿನ ಒತ್ತಡ ಹೇರಬಹುದಿತ್ತಲ್ಲ. ಸರ್ಕಾರ ನೆರಪೀಡಿತವೆಂದು ಹೇಳಲು ಕಾಂಗ್ರೆಸ್ಸನವರಿಗಾಗಲೀ ಸಿದ್ದರಾಮಯ್ಯನವರಿಗಾಗಲೀ ನೈತಿಕತೆ ಇಲ್ಲವೇ ಇಲ್ಲ ಎಂದರು.
ನಮ್ಮ ಪಕ್ಷದಲ್ಲಿ ಒಂದು ಶಿಸ್ತಿನ ಚೌಕಟ್ಟಿದೆ. ನಮ್ಮ ಸಿದ್ಧಾಂತದ ಮೇಲೆ ನಂಬಿಗೆಯಿಟ್ಟು ಪಕ್ಷಕ್ಕೆ ಬಂದವರೆಲ್ಲ ಒಂದೇ ಪಕ್ಷದ ವ್ಯಕ್ತಿಗಳು ನಾವೆಲ್ಲ. ವಲಸಿಗರು, ಮೂಲದವರು ಬೇರೆ ಎನ್ನುವುದಿಲ್ಲ ವ್ಯಕ್ತಿ ಪೂಜೆ ಎನ್ನುವುದು ಇಲ್ಲವೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಧಾನ ಕಾರ್ಯದರ್ಶಿಗಳಾದ ರವಿ ಭಟ್ಟ, ಪ್ರಸಾದ ಹೆಗಡೆ, ಕಾರ್ಯದರ್ಶಿ ನಟರಾಜ ಗೌಡರ್, ರೈತ ಮೋರ್ಚಾ ಅಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ ಉಪಸ್ಥಿತರಿದ್ದರು
Leave a Comment