ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, ಅಗತ್ಯ ಇರುವ ಎಲ್ಲ ವಿಭಾಗಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ (ತಾತ್ಕಾಲಿಕ) ನೇಮಕ ಮಾಡಿಕೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.
ಹುದ್ದೆಯ ಹೆಸರು: ಸಹಾಯಕ ಪ್ರಧ್ಯಾಪಕರು
ಹುದ್ದೆಗಳು ಅಗತ್ಯ ಇರುವ ವಿಭಾಗಗಳ ಸಂಖ್ಯೆ : 23
ಹುದ್ದೆಯ ವಿಧ : ತಾತ್ಕಾಲಿಕ ಗುತ್ತಿಗೆ ಆಧಾರಿತ ಹುದ್ದೆ.
ನೇಮಕಾತಿ ವಿಧಾನ : ನೇರ ಸಂದರ್ಶನ

ವಿದ್ಯಾರ್ಹತೆ : ಅಭ್ಯರ್ಥಿ ಯಾವ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುತ್ತಾರೋ, ಆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಎನ್ಇಟಿ / ಕೆಎಸ್ಇಟಿ / ಪಿಹೆಚ್ಡಿ ಯಾವುದಾದರೊಂದು ಅರ್ಹತೆ ಪಡೆದಿರಬೇಕು. ಹಾಗೂ ಯುಜಿಸಿ-2018 ರ ಮಾರ್ಗಸೂಚಿ ಅನುಸಾರ ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರತಕ್ಕದ್ದು.
ಸಹಾಯಕ ಪ್ರಾಧ್ಯಾಪಕರು ಹುದ್ದೆಗಳ ಖಾಲಿ ಇರುವ ವಿಭಾಗಗಳು
- ಇಂಗ್ಲಿಷ್
- ಹಿಂದಿ
- ಸಂಸ್ಕೃತ
- ತೆಲುಗು
- ಉರ್ದು
- ಇತಿಹಾಸ
- ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಸಾರ್ವಜನಿಕ ಆಡಳಿತ
- ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ
- ನಿರ್ವಹಣಾಶಾಸ್ತ್ರ
- ಶಿಕ್ಷಣಶಾಸ್ತ್ರ
- ಭೌತಶಾಸ್ತ್ರ
- ಸೂಕ್ಷ್ಮಜೀವಾಣುಶಾಸ್ತ್ರ
- ಬಯೋಟೆಕ್ನಾಲಜಿ ಮತ್ತು ಪ್ರಾಣಿಶಾಸ್ತ್ರ
- ರಸಾಯನಶಾಸ್ತ್ರ
- ಬಯೋಕೆಮಿಸ್ಟ್ರಿ
- ಮನೋವಿಜ್ಞಾನ
- ಪರಿಸರ ವಿಜ್ಞಾನ
- ಆಹಾರ ವಿಜ್ಞಾನ
- ಭೂಗೋಳಶಾಸ್ತ್ರ
- ಗಣಕಯಂತ್ರ ವಿಜ್ಞಾನ
- ಮಾಹಿತಿ ತಂತ್ರಜ್ಞಾನ
- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
- ಗಣಿತಶಾಸ್ತ್ರ ಮತ್ತು ಸಸ್ಯಶಾಸ್ತ್ರ
ಈ ಮೇಲಿನ ವಿಭಾಗಗಳಿಗೆ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯ 5 ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಸಂದರ್ಶನ ದಿನಾಂಕ: 11/08/2021 ರಿಂದ 14/08/2021 ರವರೆಗೆ ನಡೆಸಲಾಗುವುದು.
ವಿಷಯವಾರು ನಿರ್ದಿಷ್ಟ ಸಮಯ ಹಾಗೂ ಸ್ಥಳವನ್ನು ದಿನಾಂಕ 09/08/2021 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ತಮ್ಮ ಮೂಲ ದಾಖಲಾತಿಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು.
ಸೂಚನೆಗಳು
ಒಂದಕ್ಕಿAತ ಹೆಚ್ಚಿನ ವಿಷಯಕ್ಕೆ ಅರ್ಜಿಗಳನ್ನು ಸಲ್ಲಿಸಬೇಕಿದ್ದಲ್ಲಿ, ಪ್ರತಿ ವಿಷಯಕ್ಕೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.
ವೇತನ ವಿವರ INR 20,000 to 50,000/Month
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
ಕೌಶಲ
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ / NET / KSET/ PHD
ಕಾರ್ಯಾನುಭವ —
ನೇಮಕಾತಿ ಸಂಸ್ಥೆ
ಸAಸ್ಥೆಯ ಹೆಸರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ವೆಬ್ಸೈಟ್ ವಿಳಾಸ https://ksoumysuru.ac.in/
job info; Join our whatsapp group
ಉದ್ಯೋಗ ಸ್ಥಳ
ವಿಳಾಸ ಮೈಸೂರು
ಸ್ಥಳ ಮೈಸೂರು
ಪ್ರದೇಶ ಕರ್ನಾಟಕ
ಅಂಚೆ ಸಂಖ್ಯೆ 570006
ದೇಶ INDIA
Leave a Comment