
ಯಲ್ಲಾಪುರ:
ಯಕ್ಷಮಿತ್ರ ಬಳಗ ಮಾಗೋಡ ಇವರ ಸಂಯೋಜನೆಯಲ್ಲಿ ಶ್ರಾವಣ ಸಂಭ್ರಮ-06 ಕಾರ್ಯಕ್ರಮ ಈ ಬಾರಿ ಆಗಸ್ಟ್ 8 ರಂದು ಆನ್ಲೈನ್ ಮೂಲಕ ಕಲಾಭಿಮಾನಿಗಳನ್ನು ತಲುಪಲಿದೆ.
ಕೋವಿಡ್ ನಿಯಮಾನುಸಾರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲದ ಕಾರಣ ಜನರನ್ನು ಸೇರಿಸದೇ ಕಾರ್ಯಕ್ರಮ ನಡೆಸಲಾಗಿದೆ. ಶ್ರಾವಣ ಯಕ್ಷ ಸಂಭ್ರಮ ಅಂಗವಾಗಿ ಕೇವಲ ಕಲಾವಿದರನ್ನಷ್ಟೇ ಸೇರಿಸಿ ಯಕ್ಷಗಾನ ಕಾರ್ಯಕ್ರಮವನ್ನು ಈಗಾಗಲೇ ಚಿತ್ರೀಕರಿಸಲಾಗಿದ್ದು, ವಿಡಿಯೊ ಲಿಂಕ್ ಮೂಲಕ ಕಾರ್ಯಕ್ರಮವನ್ನು ಕಲಾಭಿಮಾನಿಗಳಿಗೆ ತಲುಪಿಸಲಾಗುತ್ತಿದೆ.
ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಭಟ್ಟ ಬೆಳಸೂರು ಇವರ ನೇತೃತ್ವದಲ್ಲಿ ಸತತ ಎರಡನೇ ವರ್ಷ ಈ ಪ್ರಯೋಗ ಮಾಡಲಾಗುತ್ತಿದೆ.
ಈ ಬಾರಿ ಸತ್ಯವಾನ್ ಸಾವಿತ್ರಿ, ದಕ್ಷಯಜ್ಞ ಹಾಗೂ ಗದಾಯುದ್ಧ ಯಕ್ಷಗಾನ ಪ್ರಸಂಗಗಳನ್ನು ಸ್ಥಳೀಯ ಕಲಾವಿದರು ಹಾಗೂ ಅತಿಥಿ ಕಲಾವಿದರು ಸೇರಿ 30 ಕ್ಕೂ ಹೆಚ್ಚು ಕಲಾವಿದರ ಕೂಡುವಿಕೆಯಲ್ಲಿ ಚಿತ್ರೀಕರಿಸಲಾಗಿದೆ. ಕಾರ್ಯಕ್ರಮಕ್ಕೆ ರಾಘವೇಂದ್ರ ಶಿರನಾಲಾ ಅವತ ಧ್ವನಿ-ಬೆಳಕು ಸಂಯೋಜನೆಯಿದ್ದು, ಗೋಕುಲ ವಿಡಿಯೊಗ್ರಫಿಯ ಕೃಷ್ಣಮೂರ್ತಿ ಹೆಬ್ಬಾರ ಅವರು ಉತ್ತಮ ಗುಣಮಟ್ಟದ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಇದರ ಲಿಂಕ್ ಆಗಸ್ಟ್ 8 ರಂದು ಬಿಡುಗಡೆಗೊಳ್ಳಲಿದ್ದು, ಕಲಾ ಕಾಣಿಕೆಯನ್ನು ನೀಡಿ ಆಸಕ್ತರು ಅದನ್ನು ವೀಕ್ಷಿಸಬಹುದಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಭಟ್ಟ ಬಾಳ್ಕಲ್, ಅನಂತ ಹೆಗಡೆ ದಂತಳಿಗೆ, ವಿಘ್ನೇಶ್ವರ ಹೆಗಡೆ ಕುಂಟೆಮನೆ, ಶ್ರೀರಕ್ಷಾ ಹೆಗಡೆ, ಮಂಜುನಾಥ ಭಟ್ಟ ದೇವದಮನೆ, ಮದ್ದಲೆವಾದಕರಾಗಿ ಎನ್.ಜಿ.ಹೆಗಡೆ, ಕೃಷ್ಣ ಹೆಗಡೆ ಜೋಗದಮನೆ, ರಾಘವೇಂದ್ರ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ ಕನಕನಹಳ್ಳಿ, ಪ್ರಶಾಂತ ಕೈಗಡಿ, ಪ್ರಸನ್ನ ಡಬ್ಗುಳಿ ಭಾಗವಹಿಸಿದ್ದಾರೆ.
ಕಥಾನಕದಲ್ಲಿ ಅಶೋಕ ಭಟ್ಟ ಸಿದ್ದಾಪುರ, ನೀಲಕೋಡ ಶಂಕರ ಹೆಗಡೆ, ಸದಾಶಿವ ಮಲವಳ್ಳಿ, ಭಾಸ್ಕರ ಗಾಂವ್ಕಾರ ಬಿದ್ರೆಮನೆ, ನರಸಿಂಹ ಗಾಂವ್ಕಾರ ಬಿದ್ರೆಮನೆ, ತಮ್ಮಣ್ಣ ಗಾಂವ್ಕಾರ ಬೀಗಾರ, ವಿನಾಯಕ ಭಟ್ಟ ಶೇಡಿಮನೆ, ವಿನಯ ಬೇರೊಳ್ಳಿ, ಮಂಜುನಾಥ ಗಾಂವ್ಕಾರ ಮೂಲೆಮನೆ, ನಾಗರಾಜ ಭಟ್ಟ ಕುಂಕಿಪಾಲ, ಮಂಜುನಾಥ ಹೆಗಡೆ ಹಿಲ್ಲೂರು, ದೀಪಕ ಭಟ್ಟ ಕುಂಕಿ, ಕಾರ್ತಿಕ ಕಣ್ಣಿ, ಅನಂತ ಗದ್ದೆ, ಸನ್ಮಯ ಭಟ್ಟ ಮಲವಳ್ಳಿ, ಶಿವರಾಮ ಭಾಗ್ವತ ಮಣ್ಕುಳಿ, ವರುಣ ಹೆಗಡೆ ಕಲಾವನ, ಶ್ರೀಧರ ಅಣಲಗಾರ, ಗುರು ಭಟ್ಟ ಜಂಬೆಸಾಲ, ರಾಮಕೃಷ್ಣ ಭಟ್ಟ ಕಂಚನಗದ್ದೆ ಇತರರು ಪಾತ್ರ ನಿರ್ವಹಿಸಿದ್ದಾರೆ.
ಆಸಕ್ತರು ಲಿಂಕ್ ಪಡೆಯಲು ಸುಬ್ಬಣ್ಣ ಕಂಚಗಲ್- 9448756290, ರಾಘವೇಂದ್ರ ಬೆಳಸೂರು-9481048297 ಅವರನ್ನು ಸಂಪರ್ಕಿಸಬಹುದಾಗಿದೆ.
ಯಲ್ಲಾಪುರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ
ಗ್ರುಪ್ ಸೇರಲು ಈ ಲಿಂಕ್ ಒತ್ತಿ https://chat.whatsapp.com/D0Ry5Povwke1s77ibSLq4A
Leave a Comment