ಗುಡಿಬಂಡೆ :
ಸರ್ಕಾರದಿಂದ ಯಾವುದೇ ಸೌಲಭ್ಯ ಬಂದರೂ ಅದರಲ್ಲಿ ಒಂದು ರೂಪಾಯಿ ಬಿಡದೆ ಪಡೆಯುವಂತವರು ಇರುವ ಈ ಕಾಲದಲ್ಲಿ ಪಟ್ಟಣದ ವೃದ್ದೆ ರಾಜಮ್ಮ ನನಗೆ ಮಾಸಿಕ ವೃದ್ಧಾಪ್ಯ ಪಿಂಚಣಿ ಬೇಡವೆಂದು ತಿರಸ್ಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಪಟ್ಟಣದ ಸೊಪ್ಪಿನಪೇಟೆ ನಿವಾಸಿಯಾದ ರಾಜಮ್ಮ ಕೋಂ ಕದಿರಪ್ಪ ಎಂಬುವರು ಮನೆಯ ಬಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ, ಆಕೆಯನ್ನು ಇನ್ನೂ ಎಕೆ ನೀವು ವೃದ್ಧಾಪ್ಯ ವೇತನ ಮಾಡಿಸಿಕೊಂಡಿರುವುದಿಲ್ಲ. ಈಗ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದೇವೆ, ದಾಖಲೆಗಳನ್ನು ನೀಡಿ, ನಿಮಗೆ ವೃದ್ಧಾಪ್ಯ ವೇತನ ಮಾಡಿಸಿಕೊಡುತ್ತೆವೆ ಎಂದು ಕೇಳಿದಾಗ 80 ವರ್ಷದ ರಾಜಮ್ಮ ನನಗೆ ಸರ್ಕಾರದ ಪಿಂಚಣಿ ಬೇಕಾಗಿಲ್ಲ. ನನ್ನನ್ನು ದೇವರು ಇನ್ನೂ ಗಟ್ಟಿಯಾಗೇ ಇಟ್ಟಿದ್ದಾನೆ ನನಗೆ ಏನಾದರೂ ಹಣದ ಅವಶ್ಯಕತೆ ಬಂದಲ್ಲಿ ನನ್ನ ಮಕ್ಕಳು ನೀಡುತ್ತಾರೆ.

ಇನ್ನೂ ನನಗೆ ಇರುವ ಜಮೀನಿನಲ್ಲಿ ಅಲ್ಪ ಸ್ವಲ್ಲ ಬರುತ್ತದೆ. ಇನ್ನೂ ಏಕೆ ಬೇಕೆ ನನಗೆ ಸರ್ಕಾರದ ಪಿಂಚಣಿ ಅದನ್ನು ಬೇರೆ ಬಡ ಕುಟುಂಬದವರಿಗೆ ನೀಡಿ ಎಂದು ತಿರಸ್ಕರಿಸುತ್ತಿರುವವಾಗ ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಎಷ್ಟೋ ಜನ ನಕಲಿ ದಾಖಲೆಗಳನ್ನು ಸೃಷ್ಟೀ ಮಾಡಿಕೊಂಡು ಅಧಿಕಾರಿಗಳ ಕಣ್ಣನ್ನುಮರೆ ಮಾಚಿ, ಪಿಂಚಣಿ ಸೌಲಭ್ಯ ಆದೇಶ ಮಾಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವವರು ಒಂದೆಡೆಯಾದರೇ,
ಇನ್ನೂ ಎಷ್ಟೋಜನ ಶ್ರೀಮಂತ ವರ್ಗದವರೇ ಎಲ್ಲರಿಗೂ ಬರುವ ಸೌಲಭ್ಯ ನನಗೂ ಸಹ ಬರಲಿ ಎಂದು ಅದಿಕಾರಿಗಳಿಂದ ಪಿಂಚಣಿ ಸೌಲಭ್ಯ ಆದೇಶ ಮಾಡಿಸಿಕೊಂಡು, ಪಿಂಚಣಿ ಪಡೆಯುತ್ತಿರುವ ಈ ಕಾಲದಲ್ಲಿ ಪಟ್ಟಣದ ರಾಜಮ್ಮ ನನಗೆ ಸರ್ಕಾರದಿಂದ ಬರುವ ಪಿಂಚಣಿ ಸೌಲಭ್ಯ ನನಗೆ ಬೇಡ ವಿಂದು ಸುದ್ದಿಯಾಗಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಸಿಗ್ಬತುಲ್ಲಾ. ಗುಡಿಬಂಡೆ ಟಡ್ಡಣದ ರಾಜಮ್ಮ ಮಾದರಿಯಾಗಿರುವುದು ಸಂತಸ ಎಂದರು.
ಸರ್ಕಾರದ ಮಾಸಿಕ ಪಿಂಚಣಿ ತಿರಸ್ಕರಿಸಿದ ಗುಡಿಬಂಡೆ ಪಟ್ಟಣದ ನಿವಾಸಿ ವೃದ್ದೆ ರಾಜಮ್ಮ.
Leave a Comment