ಭಟ್ಕಳ: ಮುರುಡೇಶ್ವರ ನವೀನ ಬೀಚ್ ಸಮೀಪದ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು ಸಾವಿರಾರು ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಂಗಳವಾರ ಮುರುಡೇಶ್ವರ ಪೋಲಿಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನವಾದ ಮನೆಯ ಮಾಲೀಕನನ್ನು ಮೋಹ್ಮದ್ ಸೋಯಾಬ್ ಎಂದು ತಿಳಿದು ಬಂದಿದ್ದು. ಇವರು ತಮ್ಮ ಕುಟುಂದ ಸಮೇತ ಆ.02 ರಂದು ತಮ್ಮ ಸಂಬಂದಿಕರ ಮನೆಗೆ ತೆರಳಿ ಆ.4 ರಂದು ಮನೆಗೆ ಮರಳಿ ಬಂದಾಗ 88 ಸಾವಿರ ಮೌಲದ್ಯ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದ್ದು ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment