ಹೊನ್ನಾವರು: ಕಾಂಗ್ರೇಸ್ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ ಪಕ್ಷದ ಪಾಬಲ್ಯ ಹೆಚ್ಚಿಸಲು ಜೆಡಿಎಸ್ ಚಿಂತನೆ ನಡೆಸಿದ್ದು ಆ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಗಣಪಯ್ಯ ಮಂಜು ಗೌಡ ಅಧ್ಯಕ್ಷತೆಯಲ್ಲಿ ಮೊದಲು ಹಂತದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಸೋಶಿಯಲ್ ಕ್ಲಬ್ ಆವರದಲ್ಲಿ ಪಕ್ಷದ ಜಿಲ್ಲಾಮಟ್ಟದ ಸಭೆ ಕೈಗೊಂಡು ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕಾ ಮಟ್ಟದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಘಟ್ಟದ ಮೇಲಿನ ತಾಲೂಕುಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದರು.
ಜಿಲ್ಲಾ ಕಮಿಟಿಯ ಕಾರ್ಯಾಧ್ಯಕ್ಷರಾಗಿ ಮುಂಡಗೋಡನ ಮುನಾಫ ಮಿರ್ಜಾನಕರ್ ಹಾಗೂ ಕುಮಟಾದ ಸೂರಜ್ ನಾಯ್ಕ ಸೋನಿ, ಉಪಾಧ್ಯಕ್ಷರಾಗಿ ವರಮೇಶ್ವರ ನಾಯ್ಕ ದೊಡ್ಡಣೆ ಹಾಗೂ ಜಿ.ಕೆ. ಪಟಗಾರ, ಹುಟ್ಟಣಗೇರಿ ನ್ಯಾಯವಾದಿ ವಿ.ಎಂ. ಭಂಡಾರಿ ಹೊನ್ನಾವರ, ಖಜಾಂಚಿಯಾಗಿ ಗೋವಿಂದರಾಯ ಶ್ಯಾನಭಾಗ್ ಹೊಳೆಗದ್ದೆ, ಕಾರ್ಯದರ್ಶಿಯಾಗಿ ನ್ಯಾಯವಾದಿ ದತ್ತು ಎಚ್. ಪಟಗಾರ ಕುಮಟಾ, ಸಂಘಟನಾ ಕಾರ್ಯದರ್ಶಿಯಾಗಿ ಸುಬ್ಬಯ್ಯ ನಾರಾಯಣ ನಾಯ್ಕ, ಕಜ, ಮಹಾಬಲೇಶ್ವರ ಗೌಡ ಬೆಲೆಹಿತ್ತು, ಎನ್.ಎಸ್. ಭಟ್ಟ ಮಣಸೂರು ಶಿರಸಿ, ನಾರಾಯಣ ನಾಯ್ಕ ಶಿರಸಿ ಶಹರ, ದೀಪ” ಶಂಕರ ರೇವಣಕರ್ , ಸತೀಶ್ ಹೆಗಡ ಬೈಲ ಸಿದ್ದಾಪುರ, ಮೋಹನ ಗೌಡ ಕೆಲವು ಸಿದ್ದಾಪುರ, ಗಜಾನನ ನಾಯ್ಕ ಪಟ್ಟಕ್ಕೆ ಕಾನೂನೂರು, ಕೆ.ಬಿ. ನಾಯ್ಕ ಕಾನಲ್ಲಿ ಸಿದ್ದಾಪುರ ಇವರನ್ನು ನೇಮಕ ಮಾಡಲಾಗಿದೆ.
ಹೊನ್ನಾವರ ತಾಲೂಕಾ ಪದಾಧಿಕಾರಿಗಳು ಹೊನ್ನಾವರ ತಾಲೂಕಾ ಜೆಡಿಎಸ್ ಘಟಕದ ಅಧ್ಯಕ್ಷರಾಗಿ, ಸುಬ್ರಾಯ ಗೌಡ ಕರ್ಕಿಕೋಡಿ, ಮಂಕಿ ಘಟಕದ ಅಧ್ಯಕ್ಷರಾಗಿ ಟಿ.ಟಿ ನಾಯ್ಕ ಮೂಡ್ಡಳ, ಕಾರ್ಯಾಧ್ಯಕ್ಷರಾಗಿ ಗೋವಿಂದ ಶಂಭು ಗೌಡ ಹೆದ್ದಾರಹಿತ್ತು ಗುಣವಂತ, ಉಪಾಧ್ಯಕ್ಷರಾಗಿ ನರಸಿಂಹ ತಿಮ್ಮಪ್ಪ ನಾಯ್ಕ ಬೇರಂಕಿ, ಉದಯ ತಿಮ್ಮಪ್ಪ ಗೌಡ ಹೊಸಾಡ, ಖಜಾಂಚಿಯಾಗಿ ಗಿರೀರ ವೆಂಕಪ್ಪ ಶೆಟ್ಟಿ ಉಪೆÇ್ಪೀಣ, ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ್ವರ ಸುಬ್ರಾಯ ಗೌಡ ಕಡ್ಲೆ ಇವರನ್ನು ನೇಮಕ ಮಾಡಿದ್ದಾರೆ.

ಭಟ್ಕಳ ತಾಲೂಕಾ ಜೆಡಿಎಸ್ ಘಟಕದ ಅಧ್ಯಕ್ಷರಾಗಿ ಇನಾಯಿತುಲ್ ಸಾಟಂದ್ರಿ ಭಟ್ಕಳ, ಕಾರ್ಯಾಧ್ಯಕ್ಷರಾಗಿ ದೇವಯ್ಯ ನಾಯ್ಕ ಮುಟ್ಟಳ್ಳಿ, ಉಪಾಧ್ಯಕ್ಷರಾಗಿ ಪಾಂಡುರಂಗ ಜಟ್ಟಾ ನಾಯ್ಡ ಕಾಯ್ಕಿಣಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ಕೃಷ್ಣಾನಂದ ಪೈ ಚೌತ, ಖಜಾಂಚಿಯಾಗಿ ಗಣೇಶ್ ಹರ ಮುಂಡಳಿ ಇವರನ್ನು ನೇಮಕಗೊಳಿಸಲಾಗಿದೆ.
ಕುಮುಟಾ ತಾಲೂಕಾ ಪದಾಧಿಕಾರಿಗಳು: ಕುಮಟಾ ತಾಲೂಕಾ ಜೆಡಿಎಸ್ ಘಟಕದ ಅಧ್ಯಕ್ಷರಾಗಿ ಜಿ. ಕಾರ್ಯಾಧ್ಯಕ್ಷರಾಗಿ ಬಲಿಂದ ಕುಪ್ಪಾ ಗೌಡ ತೊರಕೆ, ಉಪಾಧ್ಯಕ್ಷರಾಗಿ ವಿನಾಯಕ ಪ್ರಧಾನಕಾರ್ಯದರ್ಶಿಯಾಗಿ ದತ್ತಾ ಎಚ್, ಪಟಗಾರ್ ಜೇಷಪುರ. ಇವರನ್ನು ನೇಮಕಗೊಳಿಸಲಾಗಿದೆ.
ಪಕ್ಷದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಆದೇಶ ಪ್ರತಿಯನ್ನು ಹಸ್ತಾಂತರಿಸಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಆದೇಶಿಸಲಾಗಿದೆ.
ಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಮಾತನಾಡಿ ಚುನಾವಣೆಗೆ ಇನ್ನು ಸಮಯವಿದೆ. ಕೆಲವೇ ತಿಂಗಳಿನಲ್ಲಿ ಜಿಲ್ಲಾ ಹಾಗೂ ತಾಲೂಕ ಪಂಚಾಯತಿ ಚುನಾವಣೆ ಬರಲಿದ್ದು ಇದು ವಿಧಾನಸಭಾ ಚುನಾವಣೆಗೂ ಮುನ್ನ ನಮ್ಮಗೆಲ್ಲರಿಗೂ ಸಿಗುವ ಒಂದು ಉತ್ತಮ ಅವಕಾಶ ಇದರಲ್ಲಿ ಒಗ್ಗಟ್ಟಾಗಿ ಪಕ್ಷವನ್ನು ಸಮರ್ಥವಾಗಿ ಸ್ಪರ್ಧೆ ನೀಡಿದ್ದೆ ಆದರೆ ಮುಂಬರುವ ವಿಧಾನಸಭಾ ಚುನಾವಣೆ ಹೆಚ್ಚಿನ ಸ್ಥಾನವನ್ನು ಗಳಿಸಬಹುದು. ಆ ನಿಟ್ಟಿನಲ್ಲಿ ಇಂದಿನಿಂದಲೇ ಪಕ್ಷ ಸಂಘಟಿಸುವಂತೆ ಕಾರ್ಯಕರ್ತರಿಗೆ ಸಲಹಗೆ ನೀಡಿದರು.
ಸೂರಜ್ ಸೋನಿ ಮಾತನಾಡಿ ಪಕ್ಷದ ರಾಜ್ಯಧ್ಯಕ್ಷ ಕುಮರಸ್ವಾಮಿ ಇವರನ್ನು ಜಿಲ್ಲೆಗೆ ಕರೆತಂದು ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು. ಬೆಲೆ ಏರಿಕೆ ಅಸ್ತ್ರ ಮುಂದೆ ಇಟ್ಟು ಬಿಜೆಪಿ ವಿರುದ್ದ ಜನತೆಗೆ ಅರಿವು ಮೂಡಿಸುವ ಕಾರ್ಯ ನಡೆಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಚಿಂತನೆ ನಡೆಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗಣಪಯ್ಯು ಗೌಡ, ಪಿಟಿ ನಾಯ್ಕ, ವಿಎಂ ಭಂಡಾರಿ, ಸುಬ್ರಾಯ ಗೌಡ, ಟಿಟಿ. ನಾಯ್ಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದು ಪಕ್ಷವನ್ನು ಸಂಘಟಿಸಲು ಸಲಹೆ ರೂಪರೇಷೆಗಳನ್ನು ನೀಡಿದರು.
ವೇದಿಕೆಯಲ್ಲಿ ಎಸ್ ದಾಸಪ್ಪ, ದತ್ತು ಪಟಗಾರ. ಪಿ ಟಿ ನಾಯ್ಕ, ಸುಬ್ರಾಯ ಗೌಡ, ವಿ ಎಮ್ ಬಂಡಾರಿ, ಮುಂತಾದವರು ಇದ್ದರು,
Leave a Comment