ಬೆಂಗಳೂರು : ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲಾ ಕಾಲೇಜುಗಳು ಆರಂಭವಾಗುವುದನ್ನು ಖಚಿತಪಡಿಸಿರುವ ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಸೆಪ್ಟೆಂಬರ್ ಒಂದರಿAದ ಎಂಟನೇ ತರಗತಿಗಳನ್ನು ಆರಂಭಿಸಲು ಉದೇಶಿಸಲಾಗಿದೆ ಎಂದಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಆಗಸ್ಟ್ 23 ರಿಂದ 9 ರಿಂದ 12ರವರೆಗೆ ಭೌತಿಕ ತರಗತಿಗಳು ಆರಂಭವಾಗಲಿದ್ದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು. 23 ರಿಂದ ಆರಂಭವಾಗುವ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶುಕ್ರವಾರ ವಿಸ್ತೃತ ಎಸ್ ಓಪಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಒಂದರಿAದ ಎಂಟನೇ ತರಗತಿಗಳನ್ನು ಆರಂಭಿಸಬೇಕೆAದು ಒತ್ತಡ ಪೋಷಕರಿಂದ ಬರುತ್ತದ್ದ ಈ ಬಗ್ಗೆ ಚಿಂತನೆ ನಡೆಸಿದೆ. ಕೊರೊನಾ ಮಕ್ಕಳಿಗೆ ಹೆಚ್ಚಿನ ತೊದರೆ ನೀಡಲಾರದೆಂದು ಕೋವಿಡ್ ತಾಂತ್ರಿಕ್ ಸಮಿತಿ ಮತ್ತು ಮಕ್ಕಳ ತಜ್ಷರ ಈಗಾಗಲೇ ಸ್ಪಷ್ಟಪಡಿಸಿರುವ ಹಿನ್ನಲೆಯಲ್ಲಿ 9 ರಿಂದ 12 ನೇ ಭೌತಿಕ ತರಗತಿಗಳಿಗೆ ಬರುವ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟು ಕೊಂಡು ಆಗಸ್ಟ್ 30 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಒಂದರಿAದ ಎಂಟನೇ ತರಗತಿಗಳ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಫ್ರೌಢ ಮತ್ತು ಪದವಿ ಪೂರ್ವ ತರಗತಿಗಳ ಆರಂಭಕ್ಕೂ ಮುನ್ನ ಶಿಕ್ಷಣ ತಜ್ಞರು ಗೃಹ ಮತ್ತು ಆರೋಗ್ಯ ಇಲಾಖೆ ಯ ಅಧಿಕಾರಿಗಳೊಂದಿಗೆ ಸಲಾಲೋಚನೆ ನಡೆಸಲು ನಿರ್ಧರಿಸಲಾಗಿದ್ದೆ ಶುಕ್ರವಾರ ಸಭೆ ಜರುಗಲಿದೆ ಎಂದೂ ಸಚಿವರು ಮಾಹಿತಿ ಒದಗಿಸಿದರು.
Leave a Comment