ಹೊನ್ನಾವರ; ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಎಚ್.ಎಂ.ಮಾರುತಿ ಉಪಾಧ್ಯಕ್ಷರಾಗಿ ಕೇಶವ ತಾಂಡೇಲ್ ಆಯ್ಕೆಯಾಗಿದ್ದಾರೆ. ಖಾಸಗಿ ಶಾಲೆಯ ಪೈಪೋಟಿಯಲ್ಲಿ ಪಟ್ಟಣದಲ್ಲಿ ನುರಿತ ಶಿಕ್ಷಕರ ಸೇವೆಯಿಂದ ಉತ್ತಮ ಶಿಕ್ಷಣ ಹಾಗೂ ಸಹಪಠ್ಯದಲ್ಲಿ ಸಾಧನೆ ಮಾಡುತ್ತಿರುವ ಪ್ರಭಾತನಗರದ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿಯಿಂದ ಇಂಗ್ಲೀಷ್ ಮಾಧ್ಯಮ ಹೊಂದಿರುವ ಶಾಲೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಎಸ್.ಡಿ.ಎಂ.ಸಿ ರಚನೆಯಾಗಿದ್ದು, ಅಧ್ಯಕ್ಷರಾಗಿ ವಿಜಯವಾಣಿ ವರದಿಗಾರರಾದ ಎಚ್.ಎಂ.ಮಾರುತಿ ಆಯ್ಕೆಯಾಗಿದ್ದಾರೆ. ವಿವಿಧ ಸಂಘ ಸಂಸ್ಥೆಯಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ಕೇಶವ ತಾಂಡೇಲ ಸೇಪಸ್ಟಾರ ಗ್ರೂಪನ ಹೊನ್ನಾವರ ಶಾಖೆಯ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ೧೮ ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
Leave a Comment