ಹೊನ್ನಾವರ ಅ. 14 : ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬಾಲಾಜಿ ಬಯೋಡಿಸೇಲ್ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ನಕಲಿ ಕೆಮಿಕಲ್ ಮಾರಾಟ ಮಾಡುತ್ತಿದ್ದ ಘಟಕವನ್ನು ತಪಾಸಣೆ ನಡೆಸಿ ಮುಟ್ಟುಗೋಲು ಹಾಕಲಾಗಿದೆ.
ಅಧಿಕೃತ ಲೈಸನ್ಸ್ ಪಡೆಯದೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮಂಕಿಯಲ್ಲಿ ಇದನ್ನು ನಡೆಸುತ್ತಿದ್ದವನ ಮೇಲೆ ಉತ್ತರಕನ್ನಡ ಜಿಲ್ಲೆ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್ನವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ನಿನ್ನೆ ಜಿಲ್ಲಾಧಿಕಾರಿಗಳು ಹೊನ್ನಾವರಕ್ಕೆ ಬಂದಾಗ ವಿವರವಾಗಿ ಪರಿಶೀಲಿಸಿ ಆದೇಶಿಸಿದಂತೆ ಇಂದು ಹೊನ್ನಾವರ ತಹಶೀಲ್ದಾರ, ಸಿಬ್ಬಂದಿಗಳು, ಪೋಲೀಸರು, ಪಟ್ಟಣ ಪಂಚಾಯತ ಅಧಿಕಾರಿಗಳು ಪಂಚನಾಮೆ ನಡೆಸಿ ಪಂಪ್ನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಲೀಟರ್ಗೆ 80ರೂಪಾಯಿ ಮತ್ತು ಕಡಿಮೆ ದರದಲ್ಲಿ ಇದನ್ನು ಬಯೊಡಿಸೇಲ್ ಹೆಸರಿನಲ್ಲಿ ಮಾರುತ್ತಿದ್ದ. ಇಂಥವರ ಜಾಲ ಎಲ್ಲೆಡೆ ಹಬ್ಬಿದೆ ಎಂದು ಅಧಿಕೃತ ಡಿಸೇಲ್ ವಿತರಕರು ಹೇಳುತ್ತಿದ್ದಾರೆ. ಇದರ ಮಾಲಕ ನಾಪತ್ತೆಯಾಗಿದ್ದಾನೆ. ಹಾಡೇಹಗಲೇ 6ತಿಂಗಳಿಂದ ಈ ಪಂಪ್ ವ್ಯವಹರಿಸುತ್ತಿದ್ದು ಇತ್ತೀಚೆ ಸಾರ್ವಜನಿಕರಿಗೆ ವಿತರಣೆ ಆರಂಭಿಸಿದ್ದರು.
Leave a Comment