ಹೊನ್ನಾವರ; ಕರುನಾಡ ವಿಜಯ ಸೇನೆ ತಾಲೂಕ ಘಟಕದ ವತಿಯಿಂದ ಸಂಘಟನೆಯ ರಾಜ್ಯಾದ್ಯಕ್ಷ ಎಚ್ ಎನ್ ದೀಪಕ ಅವರ ಜನ್ಮದಿನದ ಪ್ರಯುಕ್ತ ಅಗ್ನಿ ಶಾಮಕ ಕಚೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಜನ್ಮದಿನ ಆಚರಿಸಿದರು,
ಸಂಘದ ತಾಲೂಕಾ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲು ಮಹೋತ್ಸವ ಕಾರ್ಯಕ್ರಮ ಹಂಮ್ಮಿಕೊಂಡಿದ್ದೆವೆ. ನಮ್ಮ ನಾಡು ಸದಾ ಹಸಿರಾಗಿರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆಯ ತಾಲೂಕಾ ಗೌರವಾದ್ಯಕ್ಷ ಸದಾನಂದ ಭಟ್, ತಾಲೂಕಾ ಅಧ್ಯಕ್ಷ ದನಂಜಯ ನಾಯ್ಕರಾಯಲಕೇರಿ. ಯುವ ಘಟಕದ ಉಪಾಧ್ಯಕ್ಷ ನೀತಿನ್ ಆಚಾರ್ಯ, ಕಾರ್ಯದರ್ಶಿ ಭಾಸ್ಕರತಾಂಡೇಲ್, ಅಲ್ತಾಪ್್ ಶೇಖ್, ಸಾಧಿಕ್ ಖಾನ್, ಸಂದೇಶ ನಾಯ್ಕ, ರಾಹುಲ್ ಮೇಸ್ತಾ, ಗೀರಿಶ ನಾಯ್ಕ ಚಿತ್ತಾರ, ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
Leave a Comment