ಅಂಕೋಲಾ : ಜಿಂಕೆ ಮೇಲೆ ನಾಯಿ ದಾಳಿ ನಡೆಸಿ ಗಾಯಗೊಂಡ ಜಿಂಕೆಯನ್ನು ಸ್ಥಳೀಯರು ರಕ್ಷಣೆ ಮಾಡಿದ ಘಡನೆ ತಾಲೂಕಿನ ಹೊನ್ನೇಬೈಲ್ ಗ್ರಾಮದಲ್ಲಿ ಸೋಮವಾರ ಸಂಚೆ ನಡೆದಿದೆ. ಆಹಾರ ಹುಡುಕಿಕೊಂಡು ಗ್ರಾಮದತ್ತ ಬಂದಿರುವ ಜಿಂಕೆ ಮೇಲೆ ನಾಯಿಗಳಿಂದ ದಾಳಿ ನಡೆದಿದೆ. ಜಿಂಕೆಯ ಬಲ ಕಾಲಿನ ಬಳಿ ಬಲವಾದ ಗಾಯವಾಗಿದೆ. ವಿನಾಯಕ ನಾಗಪ್ಪ ನಾಯ್ಕ ಹೊನ್ನೆಬೈಲ ಅವರು ಜಿಂಕೆಯನ್ನು ರಕ್ಷಣೆ ಮಾಡಿ ಔಷಧೋಪಚಾರ ಮಾಡಿದ್ದಾರೆ. ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
Leave a Comment