ಭಟ್ಕಳ : ವಿಸ್ಟಾಡೋಮ್ ಸೌಲಭ್ಯದೊಂದಿಗೆ ಕಾರವಾರ ಬೆಂಗಳೂರು ರೈಲು ಪ್ರಾರಂಭವಾಗಿದ್ದು ಮುರ್ಡೇಶ್ವರದಲ್ಲಿ ನಿಲುಗಡೆ ನೀಡಿರುವುದಕ್ಕೆ ಮುಡೇಶ್ವರ ನಾಗರೀಕ ಸೇವಾ ಸಮಿತಿ ಹಾಗೂ ನಾಗರೀಕರು ಅತೀವ ಸಂತಸ ವ್ಯಕ್ತಿಪಡಿಸಿ ರೈಲಿಗೆ ಪೂಚೆ ಸಲ್ಲಿಸಿ ಬಿಳ್ಕೊಟ್ಟರು.
ಈ ಸಂದಭದಲ್ಲಿ ಮಾತನಾಡಿದ ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಎಸ್. ಎಸ್. ಕಾಮತ್ ಮಾತನಾಡಿ ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಜುಲೈ ತಿಂಗಳಿನಲ್ಲಿ ಕೊಂಕಣ ರೇಲ್ವೇ ಕಾರ್ಪೋರೇಶನ್ ಆಡಳಿತ ನಿದೇರ್ಶಶಕರಿಗೆ ಪತ್ರ ಬರೆದು ಈ ಹಿಂದೆ ತಾವು ಬರೆದ ಎರಡು ಪತ್ರಗಳಿಗೆ ನಿಗಮದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಬರೆದಿದ್ದಲ್ಲದೇ ಕಾರವಾರ ಬೆಂಗಳೂರು ರೈಲಿಗೆ ಮುಡೇಶ್ವರದಲ್ಲಿ ನಿಲುಗಡೆ ಕಲ್ಪಿಸುವಂತೆ ಕೋರಿದ್ದು ಅದರಂತೆ ನಿಲುಗಡೆಯನ್ನು ನೀಡಲಾಗಿದೆ.

ಕೊಂಕಣ ರೇಲ್ವೇ ನಿಗಮ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಕೃತಜ್ಷತೆಯನ್ನು ಸಲ್ಲಿಸುವುದಾಗಿ ತಿಳಿಸುತ್ತಾ ಮುಡೇಶ್ವೆರದ ನಾಗರೀಕರಿಗಷ್ಟೇ ಅಲ್ಲದೇ ದೂರ ದೂರದಿಂದ ಬರುವ ಪ್ರವಾಸಿಗರಿಗೂ ಇದು ಅನೂಕೂಲವಗಿದೆ ಎಂದರು. ಈ ಸಂದರ್ಭದಲ್ಲಿ ಮುಡೇಶ್ವರದ ನಾಗರೀಕರು ನೂರಾರು ಸಂಖ್ಯೆಯಲ್ಲಿ ಸೇರಿ ರೈಲಿಗೆ ಪೂಜೆಯನ್ನು ಸಲ್ಲಿಸಿ, ಈಡಗಾಯಿಯನ್ನು ಒಡೆದು ಬಿಳ್ಕೊಟ್ಟರು.
Leave a Comment