ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ವಿವಿದೆಡೆ ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಒಟ್ಟು 2000ಸಾವಿರ ವ್ಯಾಕ್ಷಿನ ಡೋಸ್ಗಳು ಲಭ್ಯವಿದ್ದು ಲಸಿಕಾ ಮಹಾ ಅಭಿಯಾನ ನಡೆಯಲಿದೆ. ಕೋವಿಡ್ ನಿಯಮ ಉಲ್ಲಂಘಿಸದೆ ಮಹಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ ಎಂದು ಡಾ. ಸವಿತಾ ಕಾಮತ ಹೇಳಿದರು.
ಅವರು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕೋವಿಡ್ ಪಾಸಿಟಿವಿಟಿ ದರ ಈಗಾಗಲೆ ಹೆಚ್ಚುತ್ತಿದೆ. ಪಕ್ಕದ ಜಿಲ್ಲೆಯಲ್ಲಿ ವಾರಾಂತ್ಯದ ಲಾಕ್ಡೌನ್ ಆರಂಭವಾಗಿದೆ. 3ನೇ ಅಲೆಯ ಆತಂಕ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್ನಿಂದ ಮುಕ್ತಿ ಹೊಂದಲು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆಯುವುದೊಂದೆ ಪರಿಹಾರ. ತಾಲೂಕಿನಲ್ಲಿ ಲಸಿಕೆಯ ಅಭಾವವನ್ನು ಮನಗಂಡ ಜಿಲ್ಲಾ ವ್ಯಾಕ್ಷಿನೇಶನ್ ಅಧಿಕಾರಿ ಡಾ. ರಮೇಶ ರಾವ್ ನಮ್ಮ ಆಗ್ರಹದ ಮೇರೆಗೆ ಭಟ್ಕಳ ತಾಲೂಕಿಗೆ ಒಟ್ಟು 3500 ಲಸಿಕೆಯನ್ನು ಒದಗಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ 2000 ವ್ಯಾಕ್ಷಿನ್ ನೀಡಿದರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲೂ 1500 ವ್ಯಾಕ್ಷಿನ್ ನೀಡಲಾಗುವದು.ಪಟ್ಟಣದ ಶ್ರೀ ಗುರು ರಾಘವೇಂದ್ರ ಮಠದ ಹಿಂಬಾಗದಲ್ಲಿ 1000 ವ್ಯಾಕ್ಷಿನ ಡೋಸ್, ಹುರಳಿಸಾಲ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಭಾಭವನದಲ್ಲಿ 500 ಡೋಸ್, ಜಾಲಿಯ ಆಯುರ್ವೆದಿಕೆ ಆಸ್ಪತ್ರೆಯಲ್ಲಿ 500 ಡೋಸ್ಗಳನ್ನು ನೀಡಲಾಗುವದು.
ಸಾರ್ವಜನಿಕರು ಯಾವುದೆ ಜನಜಂಗುಳಿಗೆ ಆಸ್ಪದ ನೀಡದೆ ಬೆಳಿಗ್ಗೆಯಿಂದ ಸಂಜೆಯವರೆಗೆ ನೀಡುವ ಈ ಲಸಿಕಾಕರಣದ ಮಹಾ ಅಭಿಯಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಂದು ಲಸಿಕೆ ಪಡೆಯಬೇಕು. ಕೋವಿಡ್ ಹೆಮ್ಮಾರಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಶ್ರಮಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಬದಲ್ಲಿ ಸ್ಟಾಪ್ ನರ್ಸಗಳಾದ ರೇಖಾ ಶೆಟ್ಟಿ, ಶಶಿಕಲಾ ಇದ್ದರು.
Leave a Comment