ಹೊನ್ನಾವರ ;ತಾಲೂಕಿನ ಮಂಕಿ ಪಟ್ಟಣದಲ್ಲಿ ನೂತನವಾಗಿ ಆರಂಭವಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿ ಕೇಂದ್ರ ಸರ್ಕಾರದ ಜನೌಪಯೊಗಿ ಕಾರ್ಯಕ್ರಮದಲ್ಲಿ ಇದು ಒಂದಾಗಿದ್ದು ದೇಶದ ಜನತೆಗೆ ಇದು ಬಹುಪಯೋಗಿ ಯೋಜನೆ ಆಗಿದೆ.

ಈಗಾಗಲೇ ತಾಲೂಕ ಕೇಂದ್ರ ಹಾಗೂ ತಾಲೂಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧಿ ಮಳಿಗೆ ಮಂಕಿ ಪಟ್ಟಣ ವ್ಯಾಪ್ತಿಯಲ್ಲಿ ಈ ದಿನದಿಂದ ಸೇವೆ ಆರಂಭಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.ಅಂಗಡಿ ಮಾಲೀಕರು ಶಾಸಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಅಂಗಡಿ ಮಾಲೀಕ ಚಂದ್ರಕಾಂತ ನಾಯ್ಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment