ಗಾಂಧಿನಗರ;
ಲವ್ ಜಿಹಾದ್ ತಡೆಯುವ ಉದ್ದೆಶದಿಂದ ಗುಜರಾತ್ ಸರ್ಕಾರ ಜಾರಿಗೆ ತಂದಿರುವ ಧಾರ್ಮಿಕ ಸ್ವಾಂತAತ್ರö್ಯ (ತಿದ್ದುಪಡಿ) ಕಾಯ್ದೆಯ ಆರು ಸೆಕ್ಷನ್ಗಳಿಗೆ ಅಲ್ಲಿನ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ. ಅಂತರ್ ಧರ್ಮೀಯ ವಯಸ್ಕರು ಪರಸ್ಪರ ಒಪ್ಪಿಗೆಯಿಂದ ಇಚ್ಛೆಪಟ್ಟು ವಿವಾಹವಾದರೆ ಇದನ್ನು ಮತಾಂತರ ಉದೇಶದಿಂದ ಆದ ಮದುವೆ ಎಂದು ಹೇಳಲಾಗದು. ವಯಸ್ಕರ ಈ ಸ್ವಾತಂತ್ರö್ಯವನ್ನು ಮೊಟಕುಗೊಳಿಸುವಂತೆ ಕಾಣುವ ಈ ಸೆಕ್ಞನ್ಗಳನ್ನು ಮುಂದಿನ ಆದೇಶದವರೆಗೆ ಜಾರಿ ತರುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.

ಜೂನ್ ನಲ್ಲಿ ಜಾರಿಯಾಗಿದ್ದ ಕಾಯ್ದೆ
ಮತಾಂತರದ ಉದ್ದೇಶದಿಂದ ನಡೆಸಲಾಗುವ ಲವ್ ಜಿಹಾದ್ ತಡೆಯಲು ಧಾರ್ಮಿಕ ಸ್ವಾತಂತ್ರö್ಯ (ತಿದ್ದುಪಡಿ) ಕಾಯ್ದೆ-2021 ಅನ್ನು ರಾಜ್ಯ ಸರ್ಕಾರದ ಜೂನ್ 1ರಿಂದ ಜಾರಿ ಮಾಡಿದೆ. ಆದರೆ ಇದು ಸಂಗಾತಿಯ ಆಯ್ಕೆ ಮತ್ತು ಇಚ್ಛೆಪಟ್ಟ ಧರ್ಮದ ಅನುಸರಣೆಯ ಹಕ್ಕನ್ನು ಮೊಟಕು ಮಾಡುತ್ತದೆ. ವೈಯಕ್ತಿಕ ಸ್ವಾಯತ್ತೆಯನ್ನು ಕಸಿದುಕೊಳ್ಳುತ್ತದೆ ಎಂದು ಹೈಕೋರ್ಟ್ಗೆ ಎರಡು ಅರ್ಜಿಸಲ್ಲಿಕೆಯಾಗಿದ್ದವು. ತಿದ್ದಪಡಿ ಕಾಯ್ದಿಯ ಅನ್ವಯ ಗುಜರಾತ್ನಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ.
ಸೆಕ್ಷನ್ಗಳಾದ 3, 4, 4ಎ, 4ಸಿ, 5, 6 ಮತ್ತು 6ಎಗೆ ತಡೆ ನೀಡಲಾಗಿದೆ. ಈ ಪೈಕಿ ಮತಾಂತರದ ಉದ್ದೇಶ ಇರಲಿಲ್ಲ ಎಂಬುದನ್ನು ಸಾಬೀತು ಪಡಿಸುವ ಹೋಣೆಗಾರಿಕೆ ಆರೋಪಿಯದ್ದಾಗಿರುತ್ತದೆ ಎಂದು ವ್ಯಾಖ್ಯಾನಿಸುವ 6ಎ ಸೆಕ್ಷನ್ ಕೂಡ ಸೇರಿದೆ. ಆದರೆ ಇದು 1972 ಸಾಕ್ಷö್ಯ ಕಾಯ್ದೆಗೆ ತದ್ವಿರುದ್ಧವಗಿದೆ. ಸಾಕ್ಷö್ಯ ಕಾಯ್ದೆ ಪ್ರಕಾರ ಆರೋಪವನ್ನು ಸಾಬೀತು ಪಡಿಸುವಂತಹ ಪುರಾವೆ ನೀಡುವುದು ದೂರುದಾರನ ಹೂಣೆ ಆಗಿರುತ್ತದೆ.
Leave a Comment