ಭಟ್ಕಳ: ಸಾಮಾಜಿಕ ಜಾಲತಾಣದ ಬಳಕೆ ಎಷ್ಟು ಅಪಾಯಕಾರಿಯೊ ಅಷ್ಟೆ ಉಪಯೋಗ ಎನ್ನುವದಕ್ಕೆ ಮಂಗಳವಾರ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಸದ್ದು ಗದ್ದಲವಿಲ್ಲದೆ ಮಿನಿವಿಧಾನ ಸೌಧದ ಶೌಚಗ್ರಹ ಪಳಪಳ ಹೊಳೆಯುವಂತೆ ಮಾಡಿದ್ದು ಸಾರ್ವಜನಿಕರು ಉಪಯೋಗಕ್ಕೆ ಲಭ್ಯವಾಗಿದೆ.
ಮಂಗಳವಾರ ಬೆಳಿಗ್ಗೆ ಮಿನಿವಿಧಾನಸೌಧಕ್ಕೆ ತೆರಳಿದ್ದ ವ್ಯಕ್ತಿಯೊರ್ವರು ಅಲ್ಲಿನ ಶೌಚಗೃಹ ಉಪಯೋಗಿಸಲು ತೆರಳಿದ್ದರು. ಆದರೆ ಅಲ್ಲಿನ ಕೆಟ್ಟ ವಾಸನೆ, ಗಲೀಜು ನೋಡಿ ವಾಕರಿಕೆ ಬರುವಂತಾಗಿತ್ತು. ಅಲ್ಲಿ ವಯೋವೃದ್ಧರು, ಮಹಿಳೆಯರು ಶೌಚಗೃಹದ ಸ್ಥಿತಿ ನೋಡಿ ವಾಪಾಸು ಬರುತ್ತಿದ್ದರು. ಇದನ್ನು ನೋಡಿದ ಆ ವ್ಯಕ್ತಿ ಅದರ ಅಲ್ಲಿನ ಶೌಚಗೃಹ ಸೇರಿ ಕೈತೊಳೆಯುವ ಸ್ಥಳ ಎಲ್ಲದರ ಪೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅದು ಸಾಕಷ್ಟು ವೈರಲ್ ಆಗಿ ಸಾರ್ವಜನಿಕರು ಬಹಿರಂಗವಾಗಿಯೇ ಕಮೆಂಟ್ ಹಾಕಲು ಆರಂಭಿಸಿದ್ದರು.



ಈ ಪೋಸ್ಟ್ ತಹಶೀಲ್ದಾರ ರವಿಚಂದ್ರ ಅವರ ಗಮನಕ್ಕೆ ಬರುತ್ತಿರುವಂತೆ ಕೂಡಲೇ ಶೌಚಗೃಹದ ಜೊತೆಗೆ ಅಲ್ಲಿ ಸಾರ್ವಜನಿಕರು ಉಪಯೋಗಿಸುವ ವಾಶ್ ಬೇಸಿನ್ ಸೇರಿ ಎಲ್ಲವನ್ನು ಸ್ವಚ್ಚಮಾಡಿಸಿದ್ದಾರೆ. ಅಲ್ಲದೆ ಸ್ವಚ್ಚ ಮಾಡಿದ ಶೌಚಗೃಹದ ಪೋಟೊಗಳನ್ನು ಸ್ವತಃ ತಹಶೀಲ್ದಾರ್ರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಹಶೀಲ್ದಾರರ ತಕ್ಷಣದ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಕಮೆಂಟಗಳು ಬರಲಾರಂಬಿಸಿವೆ.
Leave a Comment