ಹೊನ್ನಾವರ; ಮಂಕಿ ಪಟ್ಟಣ ಪಂಚಾಯತಿ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ಹಲವಾರು ದಿನಗಳಿಂದ ಘನತ್ಯಾಜ್ಯ ವಸ್ತುಗಳನ್ನು ಎಲ್ಲಿಂದಲೋ ತಂದು ಸಾರ್ವಜನಿಕ ರಸ್ತೆ ಹಾಗೂ ಅರಣ್ಯ ಪ್ರದೇಶ, ರಾಷ್ಟ್ರೀಯ ಹೆದ್ದಾರಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಎಸೆಯಲಾಗುತ್ತಿತ್ತು. ಈ ಸಂಬಂಧ ಪಟ್ಟಣ ಪಂಚಾಯತ ಮಂಕಿ ಕಛೇರಿ ಮತ್ತು ತಹಶೀಲ್ದಾರ ಕಛೇರಿಗೆ ಹಲವಾರು ದೂರುಗಳು ಬಂದಿದ್ದವು.
ಅಗಸ್ಟ ೧೬ರಂದು ವಾಟ್ಸ್ ದೂರು ಆಧರಿಸಿ ಪಟ್ಟಣ ಪಂಚಾಯತ ಮಂಕಿ ಮುಖ್ಯಾಧಿಕಾರಿ ಆಜೇಯ್ ಭಂಡಾರಕರ್ ಸ್ಥಳ ಪರಿಶೀಲನೆ ನಡೆಸಿದ್ದು, ಘನ ತ್ಯಾಜ್ಯ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಹರಡಿರುವುದು ಹಾಗೂ ಸಾರ್ವಜನಿಕವಾಗಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಎಸೆದಿರುವುದು ಕಂಡುಬಂದಿತ್ತು. ಈ ಕುರಿತು ತ್ವರಿತ ಮಾಹಿತಿಯನ್ನು ಸ್ಥಳೀಯ ವಲಯ ಅರಣ್ಯಾಧಿಕಾರಿ ವರದರಂಗನಾಥ ಹಾಗೂ ಪೋಲಿಸ್ ಉಪನಿರೀಕ್ಷಕರಾದ ಅಶೋಕ ಮಾಳಭಗಿ ದೂರವಾಣಿ ಮುಖಾಂತರ ಸಂಪರ್ಕಿಸಿ ತೀವ್ರ ನಿಗಾ ಇಡುವಂತೆ ಕೋರಲಾಗಿತ್ತು, ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾ ಸಹ ಪರಿಶೀಲಿಸಲಾಗುತ್ತಿತ್ತು.

ಆರಣ್ಯ ಇಲಾಖೆ ಹಾಗೂ ಮಂಕಿ ಪಟ್ಟಣ ಪಂಚಾಯತ ಜಂಟಿ ಕಾರ್ಯಚರಣೆ ನಡೆಸಿ ಖಾಸಗಿ ವಾಹನ ಸಂಖ್ಯೆ ಕೆ.ಎ- 47, 1869 ವಾಹನದ ಮಾಲಕ ಆಬುಬಖರ್ ಅಬ್ಬಾಸ್ ರವರ ವಾಹನ ಕಾರ್ಯಾಚರಣೆ ನಡೆಸಿ, ಘನತ್ಯಾಜ್ಯ ವಸ್ತುಗಳ ಸಮೇತ ವತಪಡಿಸಿಕೊಂಡು ತಹಶೀಲ್ದಾರ ನಾಗರಾಜ ನಾಯ್ಕಡ ಮತ್ತು ಮುಖ್ಯಾಧಿಕಾರಿಗಳು ತುರ್ತು ಸಭೆ ನಡೆಸಿ ಕರ್ನಾಟರ ಮುನ್ಸಿಪಾಲ್ಟಿಸ್ ಕರಡು ಮಾದರಿ ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳು (ಉಪ ಕಾಯ್ದೆ)-2018 BYELAW ರಲ್ಲಿ ನಿರ್ದೇಶಿಸಿದಂತೆ 25000 ರೂ ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ಇದೇ ಪ್ರಕರಣ ಮರುಕಳಿಸಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ವಹಿಸುವಂತೆ ನಿರ್ಣಯಿಸಿ ಮಾಲಿಕರಿಂದ ಸೂಕ್ತ ಮುಚ್ಚಳಿಕೆ ಪತ್ರ ಪಡೆದು, ಎಲ್ಲಾ ಘನ ತ್ಯಾಜ್ಯಗಳನ್ನು ವ್ಯವಸ್ಥಿವಾಗಿ ವಿಲೇವಾರಿ ಗೊಳಿಸುವ ಷರತ್ತಿಗೊಳಪಟ್ಟು ವಾಹನವನ್ನು ದಂಡದೊಂದಿಗೆ ಹಿಂದಿರುಗಿಸಲಾಗಿದೆ.
ಈ ಘನತ್ಯಾಜ್ಯ ವಸ್ತುಗಳು ನೆರೆಯ ಭಟ್ಕಳ ತಾಲೂಕಿನ ಹಬ್ಬಳೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಟ್ಟಿರುವುದೆಂದು ತನಿಖೆಯಲ್ಲಿ ತಿಳಿದುಬಂದಿದೆ. ರಸ್ತೆ ಪಕ್ಕ ತಾಜ್ಯ ಎಸೆಯುವವರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಈ ಕೃತ್ಯ ಎಸೆಗವುವರಿಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
Leave a Comment