ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಶುಕ್ರವಾರ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಕ್ಕಿ ಅಸ್ವಸ್ಥನಾದ ಪ್ರವಾಸಿಗನೋರ್ವನ್ನು ಲೈಫ್ ಸೇಪ್ ಗಾರ್ಡ ಸಿಬ್ಬಂದಿಗಳು ರಕ್ಷಸಿ, ಪ್ರಾಣ ಉಳಿಸಿದ್ದಾರೆ.

ಬೆಂಗಳೂರು ಮೂಲದ 24 ವರ್ಷದ ಶ್ರೇಯಸ್ ಅರಸ ಅಸ್ವಸ್ಥಗೊಂಡ ಪ್ರವಾಸಿಗನಾಗಿದ್ದಾನೆ. ಬೆಂಗಳೂರಿನಿAದ ನಾಲ್ವರು ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಕುಡ್ಲೆಬೀಚ್ನ ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಯ ರಭಸಕ್ಕೆ ಸಿಕ್ಕಿ, ಶ್ರೇಯಸ್ ಅಸ್ವಸ್ಥಗೊಂಡಿದ್ದಾನೆ. ಇದನ್ನು ಗಮನಿಸಿದ ಲೈಪ್ ಸೇಫ್ ಗಾರ್ಡ್ ಸಿಬ್ಬಂದಿ ನಾಗೇಂದ್ರ ಕುರ್ಲೆ, ಟೂರಿಸ್ಟ್ ಮಿತ್ರ ರಘುವೀರ ನಾಯ್ಕ ಜೀವನ ಉಳಿಸಿದ್ದಾರೆ. ಲೈಪ್ ಸೇಫ್ ಗಾರ್ಡ್ ಸಿಬ್ಬಂದಿಯ ಕ್ಷೀಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Leave a Comment