ಹೊನ್ನಾವರ; ಕೊರೋನಾ ಕಾರಣದಿಂದ ಬಂದ್ ಆಗಿದ್ದ ತಾಲೂಕಿನ ಅನುದಾನಿತ ಮತ್ತು ಅನುದಾನ ರಹಿತ ೩೯ ಪ್ರೌಡ ಶಾಲೆಗಳು ಇಂದು ಆರಂಭಗೊಂಡಿದ್ದು, ಪ್ರಸಕ್ತ ಸಾಲಿನ ೯ ಮತ್ತು ೧೦ ನೇ ತರಗತಿ ಆರಂಭವಾಗಿದೆ. ಒಂದುವರೆ ವರ್ಷದಿಂದ ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳು ಇಂದು ಶಾಲೆಯ ಕಡೆಗೆ ಮುಖ ಮಾಡಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಕೋವಿಡ್ ಭಯ ಕಾಡುತ್ತಿದ್ದು ಕೆಲ ಶಾಲೆಯ ಪ್ರಥಮ ದಿನ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು. ತಾಲೂಕಿನ ವಿವಿದ ಶಾಲೆಗಳಲ್ಲಿ ಆರಂಭೋತ್ಸವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಜೊತೆ ಮಾವಿನ ತೋರಣ ಹಾಕಿರುವುದು ಕಂಡು ಬಂದಿದೆ.
ಕೋವಿಡ್ ನಿಯಮವಳಿಯಂತೆ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಮುಲಕ ತರಗತಿ ಆರಂಭವಾಗಿದೆ.ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಮ್.ಹೆಗಡೆ ಮಾಧ್ಯಮದವರೊಂದಿಗೆ ಮಾತನಾಡಿ ಎಸ್.ಒ.ಪಿ ಮಾಗದರ್ಶಿ ಸೂಚನೆಯಂತೆ ಶಿಕ್ಷಕರ ಸಭೆಯನ್ನು ನಡೆಸಿ ಕೋವಿಡ್ ೧೯ ರ ಸುರಕ್ಷತಾ ಕ್ರಮವನ್ನು ಪಾಲಿಸಲಾಗಿದೆ.
ತಾಲೂಕಿನ ಎಲ್ಲಾ ಪ್ರೌಡಶಾಲೆ ಆರಂಭವಾಗಿದೆ. ೨೮ ಸಿಬ್ಬಂದಿಗಳು ಮತ್ತು ಶಿಕ್ಷಕರುಗಳು ವ್ಯಾಕ್ಸಿನ್ ತೆಗೆದುಕೊಂಡಿರಲಿಲ್ಲ. ಇಂದೇ ವ್ಯವಸ್ಥೆ ಕಲ್ಪಿಸಲಾಗಿದೆ. ಬೇರೆ-ಬೇರೆ ಕಾರಣದಿಂದ ಹಾಕಿಸಿ ಕೋಂಡಿಲ್ಲಾ ಅವರಿಗೆ ಇಂದು ವ್ಯಾಕ್ಷಿನ್ ವ್ಯವಸ್ಥೆ ಮಾಡಿಸಲಾಗಿದೆ. ಪಟ್ಟಣ ಪಂಚಾಯತ ಮತ್ತು ಗ್ರಾಮ ಪಂಚಾಯತ ವತಿಯಿಂದ ಎರಡು ದಿನ ಮುಂಚಿತವಾಗಿ ಸಾನಿಟೈಸ್ ಮಾಡಿಸಲಾಗಿದೆ. ಪಾಲಕರ ಅನುಮತಿ ಪತ್ರದೊಂದಿಗೆ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
Leave a Comment