ಭಟ್ಕಳ: ಫೇಸ್ಬುಕ್ನಲ್ಲಿ ಸುನೀಲ ಅಣ್ಣನ ಅಭಿಮಾನಿ ಎನ್ನುವ ನಕಲಿ ಖಾತೆಯಲ್ಲಿ ಶಾಸಕ ಸುನೀಲ ನಾಯ್ಕರವರ
ಮಾನಹರಣವನ್ನು ಮಾಡುತ್ತಿದ್ದು, ಆ ಖಾತೆಯನ್ನು ತಡೆಹಿಡಿದು ಅದರಲ್ಲಿ ಬರೆಯುತ್ತಿರುವವರ
ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಆಪ್ತ ಸಹಾಯಕ ರಾಘವೇಂದ್ರ ಶಿರಾಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುನೀಲ್ ಅಣ್ಣನ ಅಭಿಮಾನಿ ಎಂಬ ಪೇಸ್ಬುಕ್ ಗ್ರೂಪನಲ್ಲಿ ಹೆಸರಿನಲ್ಲಿ ಶಾಸಕ ಸುನೀಲ್ ನಾಯ್ಕರ ಚಾರಿತ್ರ್ಯಹರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಬೇರೆ ಬೇರೆ ಸಮುದಾಯ ಜನರು ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದು,ಕೆಲವರು ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಟಿಸಿಕೊಂಡು ಸಮುದಾಯಗಳ ಮಧ್ಯೆ ಸಾಮರಸ್ಯವನ್ನು ಕದಡುವ ಪ್ರಯತ್ನ
ಮಾಡುತ್ತಿದ್ದಾರೆ.
ಇದರಿಂದ ಶಾಸಕರ ತೇಜೋವಧೆ ನಡೆಸುವ ಮೂಲಕ ಸಮುದಾಯಗಳ ಮಧ್ಯೆ ಸೌಹಾರ್ದತೆಯನ್ನು ಕದಡುವ
ಪ್ರಯತ್ನ ನಡೆಸಲಾಗುತ್ತದೆ. ಇದರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಆದ್ದರಿಂದ ನಕಲಿ ಖಾತೆ
ಸೃಷ್ಟಿಸಿ ಅವಹೇಳನವಾಗಿ ಬರೆಯುತ್ತಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Leave a Comment