ಹೊನ್ನಾವರ: ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ರವಿವಾರ ಬೆಳಗಿನ ಜಾವ 4:30ರ ಸುಮಾರಿಗೆ ಗೋಕಳ್ಳತನಕ್ಕೆಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊAಡು ಎಸ್ಕೇಪ್ ಆಗಿರುವ ಘಟನೆಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ಗುಣವಂತೆಯ ಮರಿ ಭಟ್ಟರ ಹೊಟೇಲ್ ಹತ್ತಿರ ಈ ಘಟನೆ ನಡೆದಿದೆ. ಮಾರುತಿ ಎರ್ಟಿಗಾಕಾರಿನಲ್ಲಿ ಬಂದ ನಾಲ್ವರು ಖದೀಮರು ಒಂದು ಕಪ್ಪು ಬಿಳಿ ಬಣ್ಣದ ಆಕಳನ್ನು ಕಾರಿನಲ್ಲಿ ತುಂಬಿ ಕದ್ದೊಯ್ದಿದ್ದಾರೆ. ಕಳ್ಳತನದ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಕ್ರಮ ಗೋ ಮಾಂಸ ಸಾಗಾಟ ಹಾಗೂ ಅಕ್ರಮ ಗೋ ಸಾಗಾಟ ಜಾಲಗಳು ಜಿಲ್ಲೆಯ ಅನೇಕ ಕಡೆಗಳಲ್ಲಿ ನಡೆಯುತ್ತಿದ್ದು,ಇಂತಹ ಕೃತ್ಯದಲ್ಲಿತೊಡಗಿಕೊಂಡವರ ಬಂಧನ ಹಾಗೂ ಇಂತಹ ಕಾರ್ಯಾಚರಣೆಗಳುನಡೆಯುವಾಗ ಪೊಲೀಸ್ ದಾಳಿಗಳು ಸಾಮಾನ್ಯ ಎನ್ನುವಂತಾಗಿದೆ.
ಆದರೂ ಇಂತಹ ಪ್ರಕರಣ ಮತ್ತೆ ಮತ್ತೆ ಪುನರಾವರ್ತನೆಯಾಗಿರುವುದು,ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಕುರಿತಂತೆಮಂಜುನಾಥ ಎನ್ನುವವರು ಮಂಕಿ ಪೊಲೀಸ್ ಠಾಣೆಯಲ್ಲಿ ದೂರುನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇನ್ನು ಇದೇ ವಿಷಯ ಸೋಮವರದ ಕೆಡಿಪಿ ಸಭೆಯಲ್ಲಿಪೊಲೀಸ್ ಇಲಾಖೆ ಚರ್ಚೆ ವೇಳೆ ಸದ್ದು ಮಾಡಿದ್ದು, ಶಾಸಕ ಸುನೀಲ್ಗೋ ಕಳ್ಳತನ ಪ್ರಕರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಿ, ಆರೋಪಿಗಳಬಂಧಿಸಿ ಎಂದು ಪಿಎಸೈ ಶಶಿಕುಮಾರ್ ಅವರಿಗೆ ಹೇಳಿದ್ದಾರೆ.
Leave a Comment