ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಲ್ಲಿ ಬದುಕುಳಿದ ಜೀವ’
ಭಟ್ಕಳ:ಮನೆ ಸಮೀಪದ ನೀರಿನ ಟ್ಯಾಂಕನ ಬಳಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡು ಸಾವಿನ ಮನೆ ಕದ ತಟ್ಟಿ ಬಂದ ನಾಲ್ಕು ತಿಂಗಳ ಬಾಣಂತಿಯನ್ನು ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಿಂದ ಬದುಕುಳಿದ ಘಟನೆ ಕಳೆದ 2 ದಿನದ ಹಿಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಸಾವಿನ ಮನೆಯ ಕದ ತಟ್ಟಿಬಂದ ನಾಲ್ಕು ತಿಂಗಳ ಬಾಣಂತಿಯನ್ನು ತಾಲೂಕಿನ ಜಾಲಿ ಆಜಾದ್ ನಗರ ನಿವಾಸಿ ಸಬ್ರಿನ್ ಬಾನು ಕಲಂದಕರ ಬಾಷಾ (24) ಎಂದು ತಿಳಿದು ಬಂದಿದೆ. ಈಕೆ ಸೋಮವಾರ ಸಂಜೆ ವೇಳೆ ತನ್ನ ಮನೆಯ ಸಮೀಪದ ನೀರಿನ ಟ್ಯಾಂಕನ ಬಳಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿದ್ದು ತಕ್ಷಣ ಇದನ್ನು ಗಮನಿಸಿದ ಆಕೆಯ ಪತಿ 10 ನಿಮಿಷದೊಳಗಾಗಿ ಇಲ್ಲಿನ ತಾಲೂಕಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು.

ಆ ವೇಳೆಗಾಗಲೇ ಆಕೆ ತೀವ್ರ ಅಸ್ವಸ್ಥಗೊಂಡು ಉಸಿರಾಟ ತೊಂದರೆಯಿಂದ ಒಂದು ಹಂತಕ್ಕೆ ಮೃತ ಪಟ್ಟಿದ್ದಾಳೆ ಎನ್ನುವಷ್ಟರಲ್ಲೇ ತಾಲೂಕಾಸ್ಪತ್ರೇಯ ವೈದ್ಯಾಧಿಕಾರಿಯಾದ ಸವಿತಾ ಕಾಮತ ಮಾರ್ಗದರ್ಶನದಲ್ಲಿ ವೈದರಾದ ಡಾ. ಸುರಕ್ಷಿತ ಡಾ.ಸುಬ್ರಹ್ಮಣ್ಯ ಹೆಗಡೆ ,ಡಾ.ಅಕ್ಷಯ ಕುಮಾರ,ಡಾ.ಲಕ್ಷ್ಮೀಶ ಸೇರಿದಂತೆ ಅಲ್ಲಿನ ನರ್ಸ್ ಗಳು ಹಾಗೂ ಸಿಬ್ಬಂದಿಗಳು ಆಕೆಯನ್ನು ವೆಂಟಿಲೇಟನಲ್ಲಿಟ್ಟು 4 ನಿಮಿಷ ದೊಳಗಾಗಿ ಆಕೆಗೆ 40 ಆ್ಯಂಟಿ ಸ್ನೇಕ್ ವಿನೋಮ್ ಇಂಜೆಕ್ಷನ್ ನೀಡಿ ಸಾವಿನ ಮನೆ ಸಮೀಪ ಹೋದವಳನ್ನು 4 ನಿಮಿಷದೊಳಗಡೆ ಆಕೆಯನ್ನು ಬದುಕುಸಿದ್ದಾರೆ.ನಂತರ ಆಕೆಯನ್ನು 2 ದಿನಗಳ ಕಾಲ ಐ.ಸಿ.ಯುನಲ್ಲಿಟ್ಟು ಇಂದು ವಾರ್ಡಗೆ ದಾಖಲಿಸಿದ್ದಾರೆ.
ಇಂದು ಸಂಪೂರ್ಣವಾಗಿ ಚೇತರಿಸಿಕೊಂಡ ಆಕೆ ಮಾಧ್ಯಮದವರೊಂದಿಗೆ ತನ್ನ ಜೀವನ್ಮರಣ ಹೋರಾಟ ನಡೆಸಿದ ಸಂಗತಿಯನ್ನು ವಿವರಿಸುತ್ತಾ ನನಗೆ ಸಿಕ್ಕ ಮರು ಜನ್ಮಕ್ಕೆ ಕಾರಣರಾದ ಸರ್ಕಾರಿ ಆಸ್ಪತ್ರೆಯ ಆಡಳಿತದ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹಾಗೂ ವೈದ್ಯರ ತಂಡ,ಶುಶ್ರೂಷಕಿಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿದ್ದಾಳೆ. ಇದೆ ವೇಳೆ ಆಕೆಯ ಪತಿ ಹಾಗೂ ಆಕೆಯ ತಾಯಿ ಕೂಡ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಭಿನಂದಿಸಿದ್ದಾರೆ.
ಐ.ಸಿ.ಯುನಿಂದ ವಾರ್ಡಗೆ ಶಿಫ್ಟ್ ಆಗಿರುವ ಆಕೆಯನನ್ನು ತಾಲೂಕಾಸ್ಪತ್ರೇಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಆಕೆಗೆ ಹೂ ಗುಚ್ಛ ನೀಡಿ ಆರೋಗ್ಯ ಇನ್ನಷ್ಟು ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಶುಭ ಹಾರೈಸಿದರು. ಹಾಗೂ ಇದೆ ಸಂಧರ್ಭದಲ್ಲಿ ಆಕೆಯ ಮರುಜನ್ಮಕ್ಕೆ ಕಾರಣರಾದ ವೈದ್ಯರಿಗೆ,ಶುಶ್ರೂಷಕಿಯರಿಗೆ ಮತ್ತು ಸಿಬ್ಬಂದಿಗಳಿಗೆ ಗುಚ್ಛ ನೀಡಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹಾವು ಕಡಿತ ಕ್ಕೊಳಗಾದ ಬಾಣಂತಿ ಇದ್ದ ಸ್ಥಿತಿಗೆ ಆಕೆಗೆ ನಿಮಿಷದವಧಿಯಲ್ಲಿ ಚಿಕಿತ್ಸೆಯ ಅವಶ್ಯಕತೆ ಇತ್ತು ಈ ಈ ಮಾಹಿತಿ ಆಧರಿಸಿ ತಕ್ಷಣಕ್ಕೆ ಆ ಸಂಧರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ವೈದ್ಯರ ತಂಡಕ್ಕೆ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದೆ. ಇದರ ಪರಿಣಾಮ ಚಿಕಿತ್ಸೆಗೆ ಸ್ಪಂದಿಸಿದ ಆಕೆ ಹಾಗೂ ದೇವರ ಆಶೀರ್ವಾದ ಆಕೆಯ ಅದ್ರಷ್ಟ ಹಾಗೂ ವೈದ್ಯರ ಸತತ ಪರಿಶ್ರಮ ಆಕೆ ಬದುಕುಳಿಯಲು ಸಾಧ್ಯವಾಯಿತು ಎಂದರು
ಈ ಸಂದರ್ಭದಲ್ಲಿ ಡಾ.ಸುಬ್ರಹ್ಮಣ್ಯ ಹೆಗಡೆ ,ಡಾ.ಅಕ್ಷಯ ಕುಮಾರ,ಡಾ.ಲಕ್ಷ್ಮೀಶ ಸೇರಿದಂತೆ ಸ್ಟಾಪ್ ನರ್ಸ ರೇಖಾ ,ಸಮಾಜ ಸೇವಕ ನಜೀರ್ ಕಾಸಿಂ ಜಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment