ಹೊನ್ನಾವರ ;ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಪರದಾಟ ಹಾಗೂ ಟ್ರಾಫಿಕ್ ಸಮಸ್ಯೆ ಎಲ್ಲ ಕಡೆ ಬಸ್ ನಿಲುಗಡೆಯ ಬಗ್ಗೆ ಕರುನಾಡ ವಿಜಯ ಸೇನೆ ತಾಲೂಕ ಕಾರ್ಯಕರ್ತರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಎರಡು ವರ್ಷದಿಂದ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕವಾಗಿ ಬಸ್ಸುಗಳ ನಿಲ್ಲಿಸಲು ಒಂದು ಸ್ಥಳವನ್ನು ಸೂಚಿಸಿದರು.
ಆ ಸ್ಥಳವನ್ನು ಬಸ್ಸ ಚಾಲಕರು ಹಾಗೂ ಕಂಟ್ರೋಲರ್ ಸರಿಯಾದ ಕ್ರಮದಲ್ಲಿ ಬಸ್ಸನ್ನು ಇಡದೆ ಅಡ್ಡಾದಿಡ್ಡಿ ವಾಹನವನ್ನು ನಿಲ್ಲಿಸುವುದರಿಂದ ಜನರಿಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ.ಅದನ್ನು ಮನದಟ್ಟು *ಕರುನಾಡ ವಿಜಯ ಸೇನೆ ಯ ಸಂಘಟಕರು ತಹಶೀಲ್ದಾರ ಅವರನ್ನು ಭೇಟಿ ಮಾಡಿ ಬಸ್ಸನ್ನು ಒಂದು ಸರಿಯಾದ ಕ್ರಮದಲ್ಲಿ ಇಡುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸಂಭದಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲಾಯಿತು.

ಕೂಡಲೇ ಡಿಪೋ ಮ್ಯಾನೇಜರ್ ಕರೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ,ಜಿಲ್ಲಾ ವಕ್ತಾರ ಶ್ರೀರಾಮ್ ಹೊನ್ನಾವರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಯ್ಕ್ ಹಡಿಕಲ್, ತಾಲೂಕ ಯುವ ಘಟಕ ಅಧ್ಯಕ್ಷ ರಾಘವೇಂದ್ರ ನಾಯ್ಕ,ಉಪಾಧ್ಯಕ್ಷ ನಿತಿನ್ ಆಚಾರ್ಯ , ಪ್ರಧಾನ ಕಾರ್ಯದರ್ಶಿ ರಾಹುಲ್ ಮೆಸ್ತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment