ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಕಿಂಗ್-ಪಿನ್ ಕೊನೆಗೂ ಸಿಸಿಬಿ ಬಲೆಗೆ ಸೆರೆ ಸಿಕ್ಕಿದ್ದು, ಮತ್ತಷ್ಟು ರೋಚಕ ಸಂಗತಿ ಬೆಳಕಿನ ಬರುವ ಸಾಧ್ಯತೆಗಳಿವೆ.
ಭಟ್ಟಳ ಮೂಲದ ಶರೀಫ್ ಹಸನ್ ಮಸೂರಿ ಅಲಿಯಾನ್ ಮಹಮ್ಮದ ಮೆಸ್ರಿ ಬಂಧಿತ 2020ರ ಸೆಪ್ಟಂಬರ್ನಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಆರೋಪದಡಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು ಈ ವಿಷಯ ತಿಳಿಯುತ್ತಿದಂತೆ ಬಂಧನ ಭೀತಿಯಿಂದ ಶರೀಫ್ ಹಸನ್ ತಲೆಮರಿಸಿಕೊಂಡಿದ್ದ.
ಸಿಸಿಬಿ ಪೊಲೀಸರು ಫೆಡ್ಲರ್ ಮೇಲೆ ನಗಾವಹಿಸಿಸಿದ್ದರು. ಇತ್ತೀಚಿನ ಬೆಂಗಳೂರಿಗೆ ಬಂದಿರುವ ವಿಷಯ ತಿಳಿದ ಖಾಕಿ ಪಡೆ, ಆ.30ರಂದು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆನಂತರ ಎನ್ ಡಿಪಿಎಸ್ ನ್ಯಾಯಾಲಯಕ್ಕೆ ಫೆಡ್ಲರ್ ಮುಸ್ರಿಯನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 14 ದಿನ ಪೊಲೀಸ್ ಕಸ್ಟಡಿಗೆ ಪಡೆದಿರುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

2018 ರ ವಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದ. ಆರೋಪಿಗಳ ಜತೆಗೆ ಮೊಬೈಲ್ ಸಂಪರ್ಕ ಇರುವುದು ಗೊತ್ತದ್ದರೂ ಆತನನ್ನು ಬಂಧಿಸಿರಲಿಲ್ಲ. ಆರೋಪಿ ಸಹ ಕೇಸ್ ಆಗುತ್ತಿದಂತೆ ಸೌದಿ ಅರೇಬಿಯಾಗೆ ಪರಾರಿಯಾಗಿ 6 ತಿಂಗಳ ಬಳಿಕ ಬೆಂಗಳೂರಿಗೆ ಬಂದಿದ್ದ.
ಅನAತರ ಪೇಜ್ -3 ಪಾರ್ಟಿಗಳನ್ನು ಆಯೋಜನೆ ಮಾಡಿ ಸೆಲೆಬ್ರೆಟಿಗಳನ್ನು ಗಣ್ಯರ ಮಕ್ಕಳನ್ನು ಆಹ್ವಾನಿಸಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ರಾಣಿಗೆ. ಸಂಜನಾ ಸೆರೆಸಿಕ್ಕ ಮೇಲೆ ಮತ್ತೆ ತಲೆಮರೆಸಿಕೊಂಡು ಬಾಣಸವಾಡಿ ಡ್ರಗ್ಸ್ ಕೇಸಿನಲ್ಲಿ ಜಾಮೀನು ಪಡೆದು ಹೊರಬಂದಿದ್ದ. ಇತ್ತ ಸಿಸಿಬಿ ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಬಂಧಿಸಿದ್ದಾರೆ 10 ತಿಂಗಳ ಬಳಿಕ ಶರೀಫ್ ಹಸನ್ ಸೆರೆಸಿಕ್ಕಿದ್ದು, ತೀವ್ರ ವಚಾರಣೆಗೆ ಒಳಪಡಿಸಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.
Leave a Comment