ಹೊನ್ನಾವರ : ತಾಲೂಕಿನ ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲಟಕೇರಿ ಗುಡ್ಡದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ, ಲಾಭದ ಸಲುವಾಗಿಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಕಟ್ಟಿ ಅಂದರ್ ಬಾಹರ್ ಜೂಗಾರಿ ಆಟವನ್ನು ಆಡುತ್ತಿದ್ದವರ ಮೇಲೆ ಹೊನ್ನಾವರ ಪೊಲೀಸರು ದಾಳಿಮಾಡಿ ಒಬ್ಬನನ್ನು ಬಂಧಿಸಿದ್ದಾರೆ. ಇನ್ನುಳಿದ ಏಳು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಹೊನ್ನಾವರ ಪೋಲೀಸರ ಕಾರ್ಯಾಚರಣೆಗೆ ಶ್ರೀನಾಥ ನಾರಾಯಣ ಆಚಾರಿ ಕಲ್ಲಟಕೇರಿ ಬಂದಿತ ಆರೋಪಿಯಾಗಿದ್ದು, ಮಂಜುನಾಥ ಪಟಗಾರ, ಸಂತೋಷ ಪಟಗಾರ, ರಮೇಶ ಆಚಾರಿ ಮಂಜುನಾಥ ನಾಯ್ಕ ನವಿಲಗೋಣ, ಮಂಜುನಾಥ ತಿಪ್ಪಯ್ಯ ನಾಯ್ಕ ಮಂಜುನಾಥ ಮುಕ್ರಿ ಮೊಗಳಕೇರಿ, ರಕ್ಷಿತ್ ಸೋಮೇಶ್ವರ ನಾಯ್ಕ ನವಿಲಗೋಣ ಇವರು ಪೊಲೀಸ್ ದಾಳಿವೇಳೆ ತಪ್ಪಿಸಿಕೊಂಡು, ತಲೆ ಮರೆಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಒಟ್ಟು 1050 ರೂಪಾಯಿ ನಗದು, ಹಾಗೂ ಆಟದ ಸಲಕರಣೆ ವಶಪಡಿಸಿಕೊಂಡಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Leave a Comment