ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಹಾಗೂ ತಾಲೂಕಿನ ಹಲವು ಕಡೆ ಮಟ್ಕಾ ಓಸಿ, ಹಾಗೂ ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಿರುತ್ತದೆ. ಇಸ್ಪೀಟ್ ಜೂಜಾಟದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಓಪನ್ ಮತ್ತು ಕ್ಲೋಸ್ನ ನಂಬರ್ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಮಟ್ಕಾ ದಂಧೆಯ ಹೆಟೈಕ್ ಬುಕ್ಕಿಗಳು ಬೇರೂರಿದ್ದಾರೆ ಜನರು ದುಡಿದ ಹಣವನ್ನೆಲ್ಲ ಇದಕ್ಕೆ ಸುರಿದು ಈ ಚಟದಿಂದ ಹೊರಬರಲಾಗದೆ ಸಾಲ ಮಾಡಿಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಇದರಲ್ಲಿ ವಿದ್ಯಾರ್ಥಿ-ಯುವಜನರು ಸೇರಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರಂತವಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಸಂಬಂಧ ಪಟ್ಟವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಬಾಹಿರ ಚಟುವಟಿಕೆ ತಡೆಯಬೇಕು ಹಾಗೂ ಹಳಿಯಾಳದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿ ಹಾವಳಿ ಹೆಚ್ಚಾಗಿ ಇದ್ದು ದಲ್ಲಾಳಿ ಹಾವಳಿ ತಪ್ಪಿಸಿ ವಿವಿಧ ಸೇವೆಗಳಿಗೆ ಇರುವ ಸರಕಾರಿ ಶುಲ್ಕದ ವಿವರವನ್ನು ಕಚೇರಿಯ ಹೊರಗೆ ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಬರೆಯಬೇಕು ಹಾಗೂ ಸಾರ್ವಜನಿಕರಿಂದ ವಿವಿಧ ಸೇವೆಗಳಿಗೆ ಸರ್ಕಾರ ನಿಗದಿ ಪಡಿಸಲಾದ ಶುಲ್ಕ ಮಾತ್ರ ಪಡೆಯಬೇಕು ಎಂದು ಇಲ್ಲವಾದಲ್ಲಿ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾನ್ಯ ತಹಸೀಲ್ದಾರ ಹಾಗೂ ಮಾನ್ಯ ಉಪ ನೋಂದಾಧಿಕಾರಿಗಳು ಹಳಿಯಾಳ ರವರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಹೋರಾಟ ಸಮಿತಿಯ ರಾಜ್ಯಧ್ಯಕ್ಷ ಮೇಘರಾಜ ಮೇತ್ರಿ ರಾಜ್ಯ ಕಾರ್ಯಾಧ್ಯಕ್ಷ ಶಿವಾಜಿ ಅನಂತಗೌಡ ಪಾಟೀಲ, ರಾಜ್ಯ ಉಪಧ್ಯಕ್ಷ ವಿಲಾಸ ದು ಮೇತ್ರಿ,ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅನಿತಾ ಮೇಘರಾಜ ಮೇತ್ರಿ, ಹಳಿಯಾಳ ತಾಲೂಕಾ ಅಧ್ಯಕ್ಷ ಕಿರಣ ಏಮ್ ಭೋವಿ, ಹಳಿಯಾಳ ನಗರ ಅಧ್ಯಕ್ಷ ಯೂಸುಫ್ ಜಗಲ್ಪೆಟ್, ಹಳಿಯಾಳ ತಾಲೂಕಾ ಮಹಿಳಾ ಅಧ್ಯಕ್ಷ ಶ್ರೀಮತಿ ಸರಸ್ವತಿ ಶೆಟ್ಯಾಲ್ಕರ್, ಜಾವೀದ್ ಜಂಗುಬಾಯಿ, ಮಡಿವಾಳ ಗಿರಪ್ಪ ಹಣಬರ,ಪಾಂಡು ಬಾಬು ರಾಣೆ,ದಾನಪ್ಪ ಹುಲಸ್ವಾರ್,ರಾಜು ಚೋರಲೇಕರ್,ನಾಮದೇವ ಗೌಡಾ,ಮಹೇಂದ್ರ ಗೌಡಾ,ಸಂಜಯ ಶಂಕರ ಮೊರೆ, ಹಾಜರಿ ಇದ್ದರು.
ವರದಿಮಂಜುನಾಥ. ಎಚ್. ಮಾದಾರ
Leave a Comment