ಶಿರಸಿ : ಮೈಸೂರು ವಿಶ್ವವದ್ಯಾಲಯದ ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ, 4 ನಗದು ಬಹುಮಾನ ಗಳಿಸಿರುವ ಶಿರಸಿ ತಾಲೂಕಿನ ಶೀಗೆಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ವಿಶೆಷ ಸಾಧನೆ ಮಾಡಿದ್ದಾರೆ.

ಮೈಸೂರು ವಿವಿಯ 101ನೇ ಘಟಕೋತ್ಸವದಲ್ಲಿ ವಿವಿಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.
ಹಳ್ಳಿ ಹುಡಗಿಯರು ಈ ಸಾಧನೆಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಶಿರಸಿ ತಾಲೂಕಿನ ಶೀಗೆಹಳ್ಳಿಯ ರೈತ ದಂಪತಿ ನಾರಾಯಣ ಹೆಗಡೆ ಮತ್ತು ಸುಮಂಗಲಾ ಹೆಗಡೆ ಅವರ ಮಗಳಾದ ಚೈತ್ರಾ, ಕೆಲಸ ಮಾಡುತ್ತಲೇ ಓದಿನ ಮಹದಾಸೆ ಈಡೇರಿಸಿಕೊಂಡು 20 ಚಿನ್ನದ ಪದಕ. 4 ನಗದು ಬಹುಮಾನ ಪಡೆದಿದ್ದಾರೆ.

ರಾಸಾಯನಶಾಸ್ತç ವಿಭಾಗದಲ್ಲಿ ಇಡೀ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆರ್ಗಾನಿಕ್, ಇನ್ ಆರ್ಗಾನಿಕ್ ಮತ್ತು ಫಿಜಿಕಲ್ ಕೆಮಿಸ್ಟಿçಯಲ್ಲಿ ತಲಾ 3 ಚಿನ್ನದ ಪದಕ ಪಡೆದ ಇವರು. ಒಟ್ಟಾರೆ ಅತಿ ಹೆಚ್ಚು ಫಲಿತಾಂಶ ಪಡೆದು ಇನ್ನೂ 11 ಪದಕಗಳೊಂದಿಗೆ ಒಟ್ಟೂ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.
ಶಿರಸಿಯ ಮಾರಿಕಾಂಬಾ ಫ್ರೌಡಶಾಲೆಯಲ್ಲಿ ಫ್ರೌಢ ಶಿಕ್ಷಣ ಚೈತನ್ಯ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಚೈತ್ರಾ, ಬಿಎಸ್ಸಿ ಪದವಿಯನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಅಲ್ಲಿಯೂ ಉತ್ತಮ ರ್ಯಾಂಕ್ ಪಡೆದು ಪದಕ ಪಡೆದಿದ್ದರು.
ನಂತರ ಮೈಸೂರು ವಿಶ್ವವಿದ್ಯಾಲಯದ ಮಾನಸಂಗAಗೋತ್ರಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಇದೀಗ ಯುವರಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರತಿದಿನ ಅಧ್ಯಾಪಕರು ತರಗತಿಯಲ್ಲಿ ಹೇಳಿಕೊಟ್ಟದ್ದನ್ನು ಹಾಸ್ಟೆಲ್ಗೆ ಬಂದ ಕೂಡಲೇ ಪುನರಾವರ್ತನೆ ಮಾಡಿಕೊಳ್ಳುತ್ತಿದ್ದೆ. ಸ್ನೇಹಿತರೊಂದಿಗೂ ಚರ್ಚೆ ಮಾಡುತ್ತಿದ್ದೆ. ಹಾಗಾಗಿ ಹೆಚ್ಚು ನೆನಪಿನಲ್ಲಿ ಉಳಿಯುತ್ತಿತ್ತು. ಪರೀಕ್ಷೆ ಒಂದು ತಿಂಗಳೂ ಇರುವಾಗ ಮಾತ್ರ ಗಮನವಿಟ್ಟು ಓದುತ್ತಿದ್ದೆ. ರಾಸಾಯನಶಾಸ್ತç ವಿಷಯದಲೇ ಸಂಶೋಧನೆ ಮಾಡಲು ಬಯಸಿದ್ದೇನೆ. ಸದ್ಯ ಫಲೋಶಿಪ್ ಗೆ ಆಯ್ಕೆಯಾಗಿದ್ದು, ಪಿಎಚ್ಡಿ ನಂತರ ಸಂಶೋಶಕಿಯಾಗುವ ಗುರಿ ಇದೆ. ಭಾರತೀಯ ವಿಜ್ಞಾನ ಸಂಸ್ಥಗೆ ಸೇರುವ ಮಹದಾಸೆ ಇದೆ ಎಂದಿದ್ದಾರೆ ಚೈತ್ರಾ ಹೆಗಡೆ.
Leave a Comment