ಐಎಎಸ್ ಅಥಿಕಾರಿ ಎಂದು ನಂಬಿಸಿ ಜನರಿಂದ ಹಣ ವಸೂಲಿಗೆ ಇಳಿದಿದ್ದವನನ್ನು ಕಗ್ಗಲೀಪುರ ಪೊಲೀಸರು ಬಂದಿಸಿದ್ದಾರೆ. ಶಿಶಿರ್ ಬಾಳಾಸಾಹೇಬ್ ಸಿಂಧೆ (೨೪) ಬಂಧಿತ. ಮಹಾರಾಷ್ಟ ಮೂಲದ ಅರೋಪಿ ಉತ್ತರಹಳ್ಳಿ ಹೋಬಳಿಯ ಸಾಲುಹುಣಸೆಯಲ್ಲಿರುವ ಬ್ರಿಗೇಡ್ ಮೆಡೋಸ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ.
ಘಟನೆ ವಿವರ : ಕಗ್ಗಲೀಪುರದ ಉದಿಪಾಳ್ಯ ಬಿಳಿಯಿರುವ ರವಿಶಂಕರ ಗುರಾಜಿ ಆಶ್ರಮದ ಬಳಿ ಇರುವ ಜಮೀನಿನ ಕಾಂಪೌAಡ್ ವಿಚಾರದಲ್ಲಿ ಗಲಾಟೆ ನಡೆಯುತ್ತಿದೆ. ಎಂದು ಠಾಣೆಗೆ ಕೆರೆ ಬಂದಿದ್ದರಿAದ ಸಿಬ್ಬಂದಿ ಅಲ್ಲಿಗೆ ತೆರಳಿದ್ದರು. ಸ್ಥಳದಲ್ಲಿದ್ದ ಶಿಶಿರ್ ನಾನು ಐಎಎಸ್. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಧಿಕಾರಿ ಎಂದು ಹೇಳಿ ಪೊಲೀಸರಿಗೆ ಆವಾಜ್ ಹಾಕಿದ್ದ. ಅನುಮಾನಗೊಂಡ ಪೊಲೀಸರು ವ್ಯಾಜ್ಯದ ಬಗ್ಗೆ ಮಾತನಾಡೋಣ ಎಂದು ಠಾಣೆಗೆ ಕರೆತಂದರು.

ಸರ್ಕಲ್ ಇನ್‌ಸ್ಪೆಕ್ಟರ್ ರಾಮಪ್ಪ ಗುತ್ತೇರ್ ವಿಚಾರಣೆಗೆ ಒಳಪಡಿಸಿದಾಗ ಆತನ ನಿಜಬಣ್ಣ ಬಯಲಾಗಿದೆ. ಶಿಶಿರ್ ಡಿಪ್ಲೊಮಾ ಪದವೀಧರನಾಗಿದ್ದು, ನಿರದ್ಯೋಗಿ ಯಾಗಿದ್ದಾನೆ ತಾನು ಐಎಎಸ್ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ವರ್ಕಿಂಗ್ ಜೋನ್ ಸೌತ್ ಕಮಾಂಡ್ ಎಂಬ ಹುದ್ದೆಯುಳ್ಳ ಗುರುತಿನಚೀಟಿ ಇಟ್ಟುಕೊಂಡು ಜನರನ್ನು ನಂಬಿಸಿದ್ದ. ರವಿಶಂಕರ ಗುರಾಜಿ ಆಶ್ರಮದವರನ್ನು ನಂಬಿಸಿ ಆಶ್ರಮಕ್ಕೆ ಸೇರಿದ ಸಿವಿಲ್ ವ್ಯಾಜ್ಯಗಳನ್ನು ಖುಲಾಸೆಗೊಳಿಸುವುದಾಗಿ ಹೇಳಿಕೊಂಡಿದ್ದ.
Leave a Comment