ಯಲ್ಲಾಪುರ : ಯುವ ಮುಖಂಡ ವಿವೇಕ್ ಹೆಬ್ಬಾರ್ ಅವರು ಗುರುವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ” ನೋಟ್ ಬುಕ್ ” ಅನ್ನು ವಿತರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ದಿನ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷರಾದ ಶ್ರೀಮತಿ ಶ್ಯಾಮಿಲಿ ಪಾಟಣಕರ್, ಮಂಡಲ ಉಪಾಧ್ಯಕ್ಷಶಿರಿಷ್ ಪ್ರಭು, ಯುವಮೋರ್ಚಾ ಅಧ್ಯಕ್ಷಪ್ರದೀಪ್ ಯಲ್ಲಾಪುರ, ಸ್ಥಾಯಿ ಸಮಿತಿ ಅಧ್ಯಕ್ಷಅಮಿತ್ ಅಂಗಡಿ, ಪ.ಪಂ ಸದಸ್ಯರಾದ ಸತೀಶ್ ನಾಯ್ಕ, ಕಲ್ಪನಾ ನಾಯ್ಕ ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸ ವೃಂದದವರು, ಉಪಸ್ಥಿತರಿದ್ದರು.
Leave a Comment