ಯಲ್ಲಾಪುರ: ನಮ್ಮ ರಾಜ್ಯ ಈ – ಶ್ರಮ ಪೋರ್ಟಲ್ ಕ್ಷಿಪ್ರ ವೇಗದಲ್ಲಿ ಚಾಲನೆ ಪಡೆದುಕೊಂಡು ಮೊದಲ ಸ್ಥಾನದಲ್ಲಿದೆ. ರಾಜ್ಯದ ಸುಮಾರು ೧.೬೦ ಕೋಟಿ ಅಸಂಘಟಿತ ಕಾರ್ಮಿಕರು ಈ ವಲಯದಲ್ಲಿ ಬರಲಿದ್ದು,ಉಚಿತ ಶಿಕ್ಷಣ ೨ಲಕ್ಷ ದ ವರೆಗೆ ಅಪಘಾತದ ವಿಮೆ ಇತರ ಸವಲತ್ತುಗಳು ಲಭ್ಯವಾಗುವದರಿಂದ ಮುಂದಿನ ದಿನಗಳಲ್ಲಿ ಇದರಿಂದ ಕ್ರಾಂತಿಕಾರಿ ಬದಲಾವಣೆ ಆಗಲಿದೆ . ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಿದ್ದಕ್ಕಾಗಿ ಯಲ್ಲಾಪುರದ ಪತ್ರಿಕಾ ವಿತರಕರು ಭಾನುವಾರ ಪಟ್ಟಣದ ಅವರ ನಿವಾಸದಲ್ಲಿ ಸಚಿವರನ್ನು ಭೆÃಟಿ ಮಾಡಿ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ನಂತರ ಸಚಿವರು ಮಾತನಾಡಿ ದೇಶದ ೬೫ ಕೋಟಿ ಗಿಂತ ಹೆಚ್ಚು ಜನರು ಈವಲಯದಲ್ಲಿ ಸೇರ್ಪಡೆಯಾಗಲಿದ್ದಾರೆ.

ಮೂರು ಆರ್ಥಿಕ ವಲಯ ( ಇ ಎಸ್ ಆಯ್, ಆದಾಯ ತೆರಿಗೆ, ಪಿಎಫ ಹೊÀಂದಿದವರು) ಇವರುಗಳನ್ನು ಹೊರತುಪಡಿಸಿ ಉಳಿದೆಲ್ಲ ವಲಯಗಳು ಇದರಲ್ಲಿ ಸುಲಭವಾಗಿ ನೊಂದಣಿ ಮಾಡಿಕೊಳ್ಳಬಹುದಾಗಿದೆ. .ಈ ಶ್ರಮ್ ಪೋರ್ಟಲ್ ಸರಳವಾಗಿದ್ದು ನೋಂದಣಿ ಮಾಡಿಕೊಳ್ಳಲು ಆಧಾರಕಾರ್ಡ ಲಿಂಕ್ ಬ್ಯಾಂಕ್ ಪಾಸ್ ಬುಕ್ ನೀಡಿದರೆ ಆಯಿತು .
ಒಂದು ಏಜೆನ್ಸಿಯಿಂದ ಇದನ್ನು ನಿರ್ವಹಿಸಲಾಗುವದು ಈ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ನೋಡಲ್ ಏಜೆನ್ಸಿ ೯೦ ಸಂಘಟನೆ ಜೊತೆಗೆ ಒಪ್ಪಂದ ( ಟೈ ಅಫ್)ಮಾಡಿಕೊಳ್ಳಲಾಗಿದೆ.ಒಬ್ಬ ವ್ಯಕ್ತಿಯನ್ನು ನೊಂದಣಿ ಮಾಡಿ ಕಾರ್ಡ ನೀಡಿದರೆ ಸರಕಾರದಿಂದ ೧೫ರೂಗಳನ್ನು ಏಜೆನ್ಸಿಗೆ ನೀಡಲಾಗುವದು. ನೀವು ಯಾರು ಹಣ ನೀಡಬೇಕಾಗಿಲ್ಲ.ಇದು ಕಾರ್ಮಿಕ ಇಲಾಖೆಯ ಒಂದು ಸಂಘಟನಾತ್ಮಕವಾದ ಕಾರ್ಯವಾಗಿದ್ದು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಈ ವೇಳೆ ಪತ್ರಿಕಾ ವಿತರಕರಾದ ಅನಿಲ ಭಟ್ಟ , ಜಯರಾಜ ಗೋವಿ , ವಿನಾಯಕ ವೆರ್ಣೇಕರ, ಅಮೃತ ಹಂದೆ ,ರಾಜು ಉಡುಪಿಕರ್, ಸಾಗರ ಬೀಡಿಕರ್, ಪ್ರಭಾ ಜಯರಾಜ ಇದ್ದರು.
Leave a Comment