ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ ದಿನಾಂಕ 14-09-2021 ರಂದು ಎಲ್ಲ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಗ್ರಾಹಕರ ಮೇಲಾಗುತ್ತಿರುವ ಹಿಂದಿ ಹೇರಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಕನ್ನಡದಲ್ಲಿ ಎಲ್ಲಾ ರೀತಿಯ ಸೇವೆಯನ್ನು ಕೊಡುವಂತೆ ಒತ್ತಾಯಿಸಿ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಅಂಚೆ ಕಛೇರಿ ಗೆ ತೆರಳಿ ಪ್ರತಿಭಟಿಸಿ ಆಗ್ರಹಪತ್ರ ನೀಡಲಾಯಿತು.
ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡದಿರುವುದು, ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಅನೇಕ ಪ್ರಕರಣಗಳು ಇತ್ತೀಚಿನ ದಿನದಲ್ಲಿ ಅನೇಕ ಕಡೆಗಳಲ್ಲಿ ಕೇಳಿಬರುತ್ತಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹೆಚ್ಚಾಗುತ್ತಿದೆ.
‘ಹಿಂದಿ ಹೇರಿಕೆ’ಯ ಈ ಅನ್ಯಾಯಗಳನ್ನು, ಗ್ರಾಹಕರ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.

ಕ. ರ. ವೇ ಹಕ್ಕೊತ್ತಾಯಗಳು:
- ಬ್ಯಾಂಕಿನ ಎಲ್ಲಾ ಸೇವೆಗಳನ್ನೂ ಕನ್ನಡದಲ್ಲೇ ನೀಡಬೇಕು. ಕನ್ನಡದಲ್ಲೇ ಬ್ಯಾಂಕಿನಲ್ಲಿ ವ್ಯವಹಾರ ನಡೆಸಲು ಸುಲಭವಾಗುವಂತೆ ಕರ್ನಾಟಕದವರನ್ನೇ ಬ್ಯಾಂಕಿನ ಉದ್ಯೋಗಿಗಳನ್ನಾಗಿ ನೇಮಿಸಬೇಕು.
- ಕನ್ನಡ ಬಾರದ ಸಿಬ್ಬಂದಿಗಳನ್ನು ಈ ಕೂಡಲೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಲಭಿಸಬೇಕು.
- ಚಲನ್ ಗಳು, ಖಾತೆ ಪುಸ್ತಕ, ಚೆಕ್ ಮತ್ತು ಎಲ್ಲಾ ಅರ್ಜಿ ನಮೂನೆಗಳೂ ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು.
- ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡಾ ಇತ್ಯಾದಿ ಭಾಷಾ ಒಕ್ಕೂಟ ವಿರೋಧಿ ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು. ಇನ್ನು ಮುಂದೆ ಈ ಆಚರಣೆಗಳು ನಮ್ಮ ಬ್ಯಾಂಕ್ ನಲ್ಲಿ ನಡೆಯಬಾರದು.
- ಬ್ಯಾಂಕಿನ ನಾಮಫಲಕ, ಸೂಚನಾ ಫಲಕಗಳಲ್ಲಿ ಶೇ. 60 ರಷ್ಟು ಭಾಗ ಕನ್ನಡ ಭಾಷೆಯನ್ನೇ ಬಳಸಬೇಕು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅದ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ, ಗೌರವ ಅದ್ಯಕ್ಷರಾದ ವಿಜಯ ಪಡ್ನಿಸ,ಉಪಾಧ್ಯಕ್ಷ ವಿನೊದ ದೊಡ್ಡಮನಿ,ಚಂದ್ರಕಾಂತ ದುರ್ವೆ,ರೈತ ಅದ್ಯಕ್ಷ ಸುರೇಶ ಕೊಕಿತಕರ,ಮಹೇಶ್ ಆಣೇಗುಂದಿ, ರಾಮಾ ಜವಳೆಕರ,ಶ್ರೀಶೈಲ ಮಠದೆವರು,ಸುದಾಕರ ಕುಂಬಾರ,ಅಶೋಕ ಪಾಟಿಲ್, ಈರಯ್ಯಾ ಹಿರೇಮಠ, ಶಿವುಡಮ್ಮಣಿಗಿಮಠ, ಕಾರ್ತಿಕ ಕಳ್ಳಿಮನಿ, ಲಕ್ಷ್ಮಣ ಪೆಡ್ನೆಕರ,ರಮೇಶ್ ತೊರಲೆಕರ,ಸಾಗರ ತೊರಲೆಕರ,ಪ್ರಶಾಂತ್ ಹೀರೆಮಠ,ಸಿದ್ದು ಕಮ್ಮಾರ, ಪದಾದಿಕಾರಿಗಳು ಹಾಗೂ ಸದಸ್ಯರು ಬಾಗವಹಿಸಿದರು.
ವರದಿ
ಮಂಜುನಾಥ. ಎಚ್. ಮಾದಾರ
ಹಳಿಯಾಳ
Leave a Comment