ಹೊನ್ನಾವರ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ದೇವಾಲಯದ ನೆಲಸಮನಡೆಯುತ್ತಿರುವುದು ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ವಿರೋಧ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ ಕೇವಲ ಭಟ್ಕಳ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯದ ಯಾವುದೆ ಭಾಗದಲ್ಲಿ ಹಿಂದೂ ದೇವಾಲಯಗಳನ್ನು ಕೆಡುವಲು ಮಂದಾದರೆ ಹೋರಾಟ ಎದುರಿಸ ಬೇಕಾಗುತ್ತದೆ.

ಮೈಸೂರಿನಲ್ಲಿ ೭೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಹಿಂದೂ ದೇಗುಲವನ್ನು ಭಕ್ತರ ಗಮನಕ್ಕೆ ತರದೆ,ಆಡಳಿತ ಮಂಡಳಿಯವರ ವಿಶ್ವಾಸಕ್ಕೆ ತರದೆ,ತನ್ನ ಅಧಿನದಲ್ಲಿರುವ ಸರ್ಕಾರಿ ಅಧಿಕಾರಿಗಳ ಮುಖೇನ,ರಾತ್ರೋ,ರಾತ್ರಿ ಏಕಾಏಕಿ ಜೆಸಿಬಿ ಯನ್ನು ಉಪಯೋಗಿಸಿ ನೆಲಸಮ ಮಾಡಲಾಗಿದೆ .ಹಿಂದುತ್ವದ ಅಜೆಂಡಾದಿಂದಲೇ ಅಧಿಕಾರ ಹಿಡಿದವರಿಂದಲೇ ಹಿಂದೂ ದೇವಾಲಯವನ್ನು ಕೆಡವಿ ಹಾಕಲಾಗಿದೆ.
ಈಗ ಹಿಂದೂ ದೇವಾಲಯ ಕೆಡವುತ್ತಿರುವುದು ಸರಿಯಾದ ನಿರ್ಧಾರವಲ್ಲ. ಇದೇನಾದರು ಮುಂದುವರಿದ ಪಕ್ಷದಲ್ಲಿ ಇದರ ವಿರುದ್ಧ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮಂಕಾಳವೈದ್ಯ ಎಚ್ಚರಿಸಿದರು.
ಅಲ್ಲದೆ ತಾವೇ ನಿಜವಾದ ಹಿಂದುಗಳು,ತಮ್ಮಿಂದಲೆ ಹಿಂದುತ್ವವೆಂದು ಜನರಲ್ಲಿ ಡೊಂಗಿ ಹಿಂದುತ್ವವನ್ನ ಪ್ರದರ್ಶಿಸುತ್ತಾ ಅಧಿಕಾರ ಹಿಡಿದಿರುವ ಜನಪ್ರತಿನಿಧಿಗಳು ಇಲ್ಲಿಯವರೆಗೆ ಒಂದೇ ಒಂದು ಹೇಳಿಕೆ,ಮಾಧ್ಯಮ ಪ್ರಕಟಣೆ ಮಾಡದೆ ಇರುವುದು ಜನರ ಮುಂದೆ ಬೆತ್ತಲೆಯಾದಂತಾಗಿದೆ ಎಂದು ಅವರು ಟೀಕಿಸಿದರು.
Leave a Comment