
ಯಲ್ಲಾಪುರ: ಅಪರಿಚಿತ ವಾಹನವೊಂದು ಪಟ್ಟಣದ ದೇವಿ ಮೈದಾನದ ಮುಂಭಾಗದಲ್ಲಿರುವ ದೇಗುಲವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದೇಗುಲದ ಮೇಲ್ಚಾವಣಿ ಸಂಪೂರ್ಣವಾಗಿ ಜಖಂಗೊAಡಿರುವ ಘಟನೆ ನಡೆದಿದೆ.
ರಾಷ್ಟಿçÃಯ ಹೆದ್ದಾರಿ ೬೩ ರ ಮುಮ್ತಾಜ್ ಹೋಟೆಲ್ ಮುಂಭಾಗದಲ್ಲಿರುವ ಶನಿ ದೇವರ ದೇಗುಲಕ್ಕೆ ವಾಹನವೊಂದು ಗುದ್ದಿದ್ದು, ದೇಗುಲದ ಮೇಲ್ಚಾವಣಿ ಕುಸಿದು ಬಿದ್ದಿದೆ.
ಅಲ್ಲದೇ ಅದಕ್ಕೆ ಹೊಂದಿಕೊAಡAತಿರುವ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಮುಂಜಾನೆ ಕೆ.ಇ.ಬಿ. ಇಂದ ಇದರ ದುರಸ್ತಿ ಕಾರ್ಯ ನಡೆಸಲಾಯಿತು. ಇದರಿಂದ ಪಟ್ಟಣದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯವಾಗಿತ್ತು. ಡಿಕ್ಕಿ ಹೊಡೆದ ವಾಹನವು ಸ್ಥಳದಿಂದ ಪರಾರಿಯಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.
Leave a Comment