ಭಟ್ಕಳ: ಬೈಕಿನಲ್ಲಿ ಸಾಗುತ್ತಿದ್ದ ಯುವಜೋಡಿಯ ಮೇಲೆ ಯುವತಿಯ ಪರಿಚಯಸ್ಥರು ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಮನ್ಕುಳಿ ಪೆಟ್ರೋಲ್ ಪಂಪ್ ಎದುರು ರಾಜಸ್ತಾನದ ಮೂಲದ ಯುವಕನೊರ್ವ ಗುಳ್ಮಿಯ ಯುವತಿಯನ್ನು ಕರೆದುಕೊಂಡು ಹೋಗಲು ಅಟೋ ರಿಕ್ಷಾವೊಂದನ್ನು ಕರೆಸಿದ್ದಾನೆ. ಯುವತಿ ಆಟೋ ಹತ್ತಿ ಯುವಕ ತಿಳಿಸಿದ ಸ್ಥಳಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬಂದ ಯುವತಿಯ ಪರಿಚಯಸ್ಥರು ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಹಾಡು ಹಗಲಿನಲ್ಲಿ ಯುವಕನೊರ್ವನನ್ನು ಹೆದ್ದಾರಿ ಬದಿಯಲ್ಲಿ ಹಿಡಿದು ಥಳಿಸುತ್ತಿರುವುದನ್ನು ನೋಡಿದ ಜನ ಹಲ್ಲೆ ನಡೆಸುತ್ತಿದ್ದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲ್ಲೆ ನಡೆಸಲು ನಿಮಗೆ ಅಧಿಕಾರ ಕೊಟ್ಟರ್ಯಾರು ಎಂದು ಮಾತಿನ ಚಕಮಕಿ ನಡೆದಿದೆ. ನಿಮಗೆ ಆಕ್ಷೇಪ ಇದ್ದರೆ ಪೊಲೀಸರಿಗೆ ದೂರು ನೀಡಿ.
ಸಾರ್ವಜನಿಕವಾಗಿ ರಸ್ತೆಯಲ್ಲಿ ರಾದ್ದಾಂತ ನಡೆಸುವುದು ಯಾಕೆ ಎಂದಿದ್ದಾರೆ. ಯುವಕ ಯುವತಿ ಪರಸ್ಪರ ಒಪ್ಪಿ ಹೋಗುವಾಗ ಯುವಕನನ್ನು ಮಾತ್ರ ಥಳಿಸುತ್ತಿದ್ದರಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a Comment