ಭಟ್ಕಳ: ಜೆಸಿಬಿ ಡಿಕ್ಕಿಯಾಗಿ ಮಹಿಳೆಗೆ ಕಾಲಿಗೆ ಗಂಭೀರ ಗಾಯವಾದ ಘಟನೆ ಶಿರಾಲಿಯಲ್ಲಿ ನಡೆದಿದೆ.
ಮಹಿಳೆ ಶಿರಾಲಿಯ ಆಳ್ವೆಕೋಡಿ ಮುಂಗಿ ಮನೆ ನಿವಾಸಿ ಸುಜಾತಾ ಶ್ರೀಧರ ಮೊಗೇರ (38) ಎಂದು ಗುರುತಿಸಲಾಗಿದೆ. ರಾತ್ರಿ ರಸ್ತೆ ದಾಟಲು ಶಿರಾಲಿಯ ಚಿತ್ರಾಪುರ ರಸ್ತೆಯ ದ್ವಾರದ ಬಳಿ ನಿಂತಿದ್ದ ಸಂದರ್ಭದಲ್ಲಿ ಭಟ್ಕಳದಿಂದ ಶಿರಾಲಿಗೆ ಬಂದ ಜೆಸಿಬಿಯೊಂದು ಕ್ರಾಸ್ ಮಾಡುವ ಸಂದರ್ಭದಲ್ಲಿ ಹೊನ್ನಾವರದಿಂದ ಭಟ್ಕಳಕ್ಕೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಈಕೆಗೂ ಗುದ್ದಿದೆ. ಗ್ರಾಮೀಣ ಠಾಣೆಯಲ್ಲಿ ಮಹಿಳೆಯ ಸಹೋದರ ಭಾಸ್ಕರ ವೆಂಕಟ್ರಮಣ ಮೊಗೇರ ಅಪಘಾತಕ್ಕೆ ಕಾರಣನಾದ ಜೆಸಿಬಿ ಚಾಲಕ ದೂರು ನೀಡಿದ್ದಾರೆ.
Leave a Comment