ಹೊನ್ನಾವರ; ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕ ಸಂಘಟನೆ ಇದರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಟಣದ ಪ್ರವಾಸಿಮಂದಿರದ ಆವರಣದಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಹಾಗೂ ತಾಲೂಕ ಅಧ್ಯಕ್ಷರಾಗಿ ರಾಘವೇಂದ್ರ ಕೆ ಮೇಸ್ತ ಉಪಾಧ್ಯಕ್ಷರಾಗಿ ಸಿಂಝೋನ್ ರೊಡ್ರಗೀಸ್ ಸಂಘಟನಾ ಕಾರ್ಯದರ್ಶಿಯಾಗಿ ಎನ್ ಗಣಪತಿ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ ಗೇರುಸೊಪ್ಪ, ಖಜಾಂಚಿಯಾಗಿ ಹನಿಪ್ ಶೇಖ್ ಗೌರವಾಧ್ಯಕ್ಷರಾಗಿ ಕೃಷ್ಣ ಹರಿಜನ, ಸಲಹೆಗಾರರಾಗಿ ಕೇಶವ ಎಲ್ ಮೇಸ್ತ, ಸಂಚಾಲಕರಾಗಿ ಶ್ರೀಕಾಂತ್ ಎಚ್ ಮೇಸ್ತ, ವಕ್ತಾರರಾಗಿ ವೆಂಕಟೇಶ್ ಮುರುಡೇಶ್ವರ. ಆಯ್ಕೆಯಾದರು.
ಯುವ ಘಟಕದ ಅಧ್ಯಕ್ಷರಾಗಿ ಕಿರಣ್ ಮೇಸ್ತ, ಉಪಾಧ್ಯಕ್ಷರಾಗಿ ರಾಜೇಶ್ ಪಟಗಾರ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ದೇಶಭಂಡಾರಿ, ಸಹ ಕಾರ್ಯದರ್ಶಿಯಾಗಿ ಪ್ರಶಾಂತ್ ಮಡಿವಾಳ ಮತ್ತು ಮಂಜುನಾಥ ನಾಯ್ಕ ಆಯ್ಕೆಯಾದರು. ಜಿಲ್ಲಾ ಕಾರ್ಯದರ್ಶಿಯಾದ ಪ್ರದೀಪ್ ಶೆಟ್ಟಿ ಮಾತನಾಡಿ ಕನ್ನಡ ನೆಲ ಜಲ ಭಾಷೆ ಇವೆಲ್ಲದರ ಜೊತೆಗೆ ಬಡವರ ಪಾಲಿನ ಧ್ವನಿಯಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಭ್ರಷ್ಟಾಚಾರಮುಕ್ತ ಸಮಾಜಕ್ಕಾಗಿ ಜನಸಾಮಾನ್ಯರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ತಾಲೂಕ ಅಧ್ಯಕ್ಷರಾದ ರಾಘವೇಂದ್ರ ಮೇಸ್ತ ಮಾತನಾಡಿ ಸಂಘಟನೆಯ ಬೆಳವಣಿಗೆಗಾಗಿ ಸಂಘದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಒಂದಾಗಿ ಕೆಲಸ ಮಾಡಬೇಕು ಸಮಾಜದ ಜೊತೆಗೆ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಕೊಂಡು ನೆಲ-ಜಲ-ಭಾಷೆಯ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲು ಸಾಧ್ಯ ಎಂದು ನುಡಿದರು. ಪ್ರಾಸ್ತಾವಿಕವಾಗಿ ಏನ್. ಗಣಪತಿ ಅವರು ಸಂಘದ ಯೋಜನೆ ಹಾಗೂ ಯೋಚನೆಯ ಮತ್ತು ಉದ್ದೇಶಗಳು ಸಂಘದ ಸಾಮಾಜಿಕ ಕಾರ್ಯಗಳು ಪದಾಧಿಕಾರಿಗಳ ಕಾರ್ಯ ವೈಖರಿಗಳು ಹೇಗಿರಬೇಕೆಂದು ವಿವರಿಸಿದರು. ಈ ಸಂದರ್ಭದಲ್ಲಿ ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Leave a Comment