
ಯಲ್ಲಾಪುರ : ಚಾಲಕನ ನಿರ್ಲಕ್ಷ್ಯ ದಿಂದ ಲಾರಿಯೊಂದು ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಪಟ್ಟಣದ ಗಾಂಧಿ ಚೌಕದ ಪೊಲೀಸ್ ಠಾಣೆಯ ಮುಂಭಾಗದಲ್ಲಿಬುಧವಾರ ನಡೆದಿದೆ.
ಅಂಕೋಲಾ ಕಡೆಯಿಂದ ಅತಿ ವೇಗವಾಗಿ ಬಂದAತಹ ಲಾರಿ, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸಂತೋಷ ಅಸೂಕರ ಅವರ ವಾಣಿಜ್ಯ ಕಟ್ಟಡದಲ್ಲಿಯ ಅಂಗಡಿಗಳಿಗೆ ನುಗ್ಗಿದ್ದು ,3ಅಂಗಡಿಗಳಿಗೆ ಹಾನಿಯಾಗಿದೆ ಸುಮಾರು ೪ ಲಕ್ಷದಷ್ಟು ನಷ್ಟವನ್ನುಂಟು ಮಾಡಿದೆ ಎಂದು ಅಂದಾಜಿಸಲಾಗಿದೆ.
ಲಾರಿಯಲ್ಲಿದ್ದ ಚಾಲಕ ಸೇರಿದಂತೆ ೩ ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಕುರಿತು ಚಾಲಕ ಪ್ರವೀಣ ಮಡಗಾಂವಕರ್ ಮೇಲೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment