ಮಹಾನ್ ಕ್ರಾಂತಿಕಾರಿ, ದೇಶಭಕ್ತ ಭಗತ್ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ವಿಶಿಷ್ಟಕಾರ್ಯಕ್ರಮಗಳು ನಡೆಯಿತು. ನಾಡಿನ ಹೆಸರಾಂತ ಲೇಖಕಿಜನಪ್ರೀಯ ವೈದ್ಯೆ ಡಾ. ಅನುಪಮಾ ಇವರ ಕವಲಕ್ಕಿಯ ಜಲಜಾಕ್ಲಿನಿಕ್ ಪಕ್ಕದಲ್ಲಿ ಭಗತ್ ಸಿಂಗ್ ಓದು ಮನೆ ಆರಂಭವಾಯಿತು.
ಜೊತೆಯಲ್ಲಿ ಡಾ. ಅನುಪಮಾ ಅವರ ಕೃತಿ ‘ಜನಸಂಗಾತಿಭಗತ್’ ಜೀವನ ಚರಿತ್ರೆ ಮತ್ತು ಅವರ ‘ಕೋವಿಡ್ ಡಾಕ್ಟರ್ಡೈರಿ’ ಇವುಗಳ ಲೋಕಾರ್ಪಣೆ ನಡೆಯಿತು.ಊರ ಗಣ್ಯರಾದ ಓದುವುದನ್ನು ಪ್ರೀತಿಸುವ ಜನಾರ್ಧನಶೆಟ್ಟಿ,ಶಿಕ್ಷಕ ಎಂ.ಡಿ. ನಾಯ್ಕ, ಎನ್.ಎಸ್. ಭಂಡಾರಿವಾಚನಾಲಯವನ್ನು ಉದ್ಘಾಟಿಸಿ ಕೃತಿಗಳನ್ನುಬಿಡುಗಡೆಗೊಳಿಸಿದರು.

ಕವಲಕ್ಕಿಗೆ ಬಂದು ನೆಲೆಸಿಸಾರ್ವಜನಿಕರ ದೈಹಿಕ ಆರೋಗ್ಯವನ್ನು ಮಾತ್ರವಲ್ಲಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತಕ್ರಿಯಾಶೀಲತೆಯನ್ನು ಬೆಳೆಸುತ್ತಿರುವ ಡಾ. ಅನುಪಮಾವಾಚನಾಲಯ ಆರಂಭಿಸಿ ಓದುಗರಿಗೆ ಅನುಕೂಲಮಾಡಿಕೊಡುತ್ತಿರುವುದು ಅಭಿನಂದನೀಯ ಎಂದು ಇವರುನುಡಿದರು.
ಈ ಸಂದರ್ಭದಲ್ಲಿ ಅನುಪಮಾರಿಂದ ವಿವಿಧ ನೆರವುಪಡೆದ ವಿದ್ಯಾರ್ಥಿಗಳು ಕೃತಜ್ಞತೆ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅನುಪಮಾ ಆಸ್ಪತ್ರೆಗೆಬಂದು ನನಗಾಗಿ ಕಾಯುತ್ತಿರುವ ರೋಗಿಗಳು, ಸುಮ್ಮನೆಸುತ್ತಾಡುವ ಜನರು ಇಲ್ಲಿ ಕುಳಿತು ಇಷ್ಟವಿದ್ದ ಪತ್ರಿಕೆ,ಪುಸ್ತಕ ಓದಿ ಜ್ಞಾನ ಹೆಚ್ಚಿಸಿಕೊಳ್ಳಲಿ ಎಂದು ಈ ಉಚಿತವಾಚನಾಲಯ ಆರಂಭಿಸುತ್ತಿದ್ದೇನೆ, ಭಗತ್ ಸಿಂಗ್ ಕೇವಲದೇಶಭಕ್ತ ಮಾತ್ರವಲ್ಲ ಪುಸ್ತಕ ಪ್ರಿಯರಾಗಿದ್ದರು. ಇದಕ್ಕಾಗಿಯೇ ಅವರ ಜನ್ಮದಿನದ ಸವಿ ನೆನಪಿಗಾಗಿ ಪುಸ್ತಕ ಆರಂಭಿಸಿದರು.
Leave a Comment