ಹೊನ್ನಾವರ; ಜಿಲ್ಲೆಯ ಗ್ರಾಮೀಣ ಭಾಗಗಳಸಾಂಪ್ರದಾಯಿಕ ಸಾವಯವ ಶಾಖಾಹಾರಿ ಅಡುಗೆಸಾಮಗ್ರಿಗಳನ್ನು ಉತ್ಪಾದಿಸಿ ವಿತರಿಸುವ ಸಾಹಸಿ ಯುವಕರ ಫಾರ್ಮಿನ್ ಉತ್ಪನ್ನಗಳನ್ನು ಬಿಡುಗಡೆ ಹೊನ್ನಾವರದ ಜೇನು ಸೊಸೈಟಿ ಆವರಣದಲ್ಲಿ ನಡೆಯಿತು. ಸಾವಯವ ಉತ್ಪನ್ನಗಳಿಗೆ ದೊಡ್ಡಪ್ರಮಾಣದಲ್ಲಿ ಪೇಟೆ ಕಲ್ಪಿಸಿ ಹೆಣ್ಣುಮಕ್ಕಳ ತವರುಮನೆಎಂದು ಪ್ರಸಿದ್ಧಿ ಪಡೆದ ಕದಂಬ ಸಂಸ್ಥೆಯ ಅಧ್ಯಕ್ಷರೂ,ಕ್ಯಾಂಪ್ಕೋ ನಿರ್ದೇಶಕರೂ ಆದ ಶಂಭುಲಿಂಗ ಹೆಗಡೆ ದೀಪಬೆಳಗಿ, ಉತ್ಪನ್ನಗಳನ್ನು ಅನಾವರಣಗೊಳಿಸಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿಸಾಂಪ್ರದಾಯಿಕವಾದ, ಶುಚಿರುಚಿಯಾದ, ರಾಸಾಯನಿಕಗಳಬೆರಕೆಯಿಲ್ಲದ ನೂರಾರು ತಂಬಳಿ,ಹಸಿ, ಗೊಜ್ಜು, ಉಪ್ಪಿನಕಾಯಿ,ಹಪ್ಪಳ ಮೊದಲಾದ ಉತ್ಪನ್ನಗಳಿವೆ. ಇವುಗಳನ್ನುಪೇಟೆಯ ಜನ ಬಯಸುತ್ತಾರೆ. ಆದ್ದರಿಂದ ಇದೇ ಉದ್ದೇಶಕ್ಕೆಆರಂಭಿಸಲಾದ ಕದಂಬ ಯಶಸ್ವಿಯಾಗಿ ಮುನ್ನಡೆದಿದೆ.

ಉತ್ತಮ ಗುಣಮಟ್ಟದ, ಒಳ್ಳೆಯ ಪ್ಯಾಕಿಂಗ್ವುಳ್ಳ ಆಹಾರಪದಾರ್ಥಗಳು ಎಷ್ಟಿದ್ದರೂ ನಾವು ಮಾರುಕಟ್ಟೆ ಕಲ್ಪಿಸುತ್ತೇವೆ,ಇಂದು ಚಾಲನೆ ದೊರೆತ ಫಾರ್ಮಿನ್ಗೆ ಕದಂಬ ತಾಯಿಯಸ್ಥಾನದಲ್ಲಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಹೊನ್ನಾವರದ ವೀಳ್ಯದೆಲೆ ವಿದೇಶದಲ್ಲಿಪ್ರಸಿದ್ಧವಾಗಿದ್ದು ಒಣ ವೀಳ್ಯದೆಲೆ, ಅಡಿಕೆ, ಸುಣ್ಣ ಸೇರಿಸಿ ಉತ್ತಮಪ್ಯಾಕಿಂಗ್ ಮಾಡಿದರೆ, ಗೇರುಹಣ್ಣಿನ ವಿವಿಧ ಉತ್ಪನ್ನಗಳನ್ನಸಿದ್ಧಪಡಿಸಲು ತರಬೇತಿ ನೀಡಿ ಕದಂಬ ಅದಕ್ಕೂ ಪೇಟೆಕಲ್ಪಿಸುತ್ತದೆ, ಸಹಕಾರಿ ತತ್ವವನ್ನು ಘಟ್ಟದ ಮೇಲಿನಂತೆಘಟ್ಟದ ಕೆಳಗಿನ ತಾಲೂಕುಗಳ ರೈತರುಅಳವಡಿಸಿಕೊಂಡರೆ ಕ್ಷಿಪ್ರ ಗ್ರಾಮೀಣ ಅಭಿವೃದ್ಧಿಸಾಧ್ಯವಾಗುತ್ತದೆ. ಹಲಸಿನ ಹಣ್ಣಿನಂತಹ ಉತ್ಪನ್ನಗಳನ್ನುಸಂಸ್ಕರಿಸಿ ದೇಶವಿದೇಶದಲ್ಲಿ ಪೇಟೆ ಕಲ್ಪಿಸಬಹುದು, ರೈತರುಮನಸ್ಸು ಮಾಡಬೇಕು ಎಂದು ಹೇಳಿದರು.
ಅತಿಥಿ ಉದ್ಯಮಿ ಮಂಜುನಾಥ ಭಟ್ ಸುವರ್ಣಗದ್ದೆ ಮಾತನಾಡಿಹಳ್ಳಿಯ ಜನ ಸುಖ ಅರಸಿ ಪೇಟೆಗೆ ಹೋಗುತ್ತಿದ್ದರು ಈಗಮರಳಿ ಹಳ್ಳಿಗೆ ಬಂದು ಇಂತಹ ಉದ್ಯಮ ಆರಂಭಿಸಿ ನೆಮ್ಮದಿಕಾಣುತ್ತಿರುವುದು ಅಭಿಮಾನದ ಸಂಗತಿ, ಇಂಥವರ ಸಂಖ್ಯೆಹೆಚ್ಚಬೇಕು ಎಂದರು.
ಜೇನುಸಂಘದ ಅಧ್ಯಕ್ಷ, ಕೆಡಿಸಿಸಿಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್, ಪತ್ರಕರ್ತ ಜಿ.ಯು.ಭಟ್ ಮಾತನಾಡಿ ಹಲವು ಉತ್ಪನ್ನಗಳಿಗೆ ಕದಂಬ ಸಂಸ್ಥೆ ನೆಲೆಯೂರಲು ಸಹಕರಿಸಿದೆ. ಜಿಲ್ಲೆಯಲ್ಲಿ ಇಂತಹ ಹಲವು ಉತ್ಪನ್ನಗಳು ಆಗಮಿಸಬೇಕಿದೆ. ಆ ಮೂಲಕ ಇಲ್ಲಿ ಯಶ್ವಸಿ ಉದ್ಯಮ ಆರಂಭವಾಗುವ ಮೂಲಕ ಅಭಿವೃದ್ದಿ ಕಾಣಲಿ ಎಂದು ಶುಭ ಹಾರೈಸಿದರು. ಪ್ರಸನ್ನ ಹೆಗಡೆ ಅತಿಥಿಗಳನ್ನುಗೌರವಿಸಿದರು. ಗಣೇಶ ಹೆಗಡೆ ಮಾಗೋಡು ಸ್ವಾಗತಿಸಿದರು. ವಿನಾಯಕ ಹೆಬ್ಬಾರ ವಂದಿಸಿದರು.
ಒಂದುಲಕ್ಷ ಕ್ವಿಂಟಲ್ ಅಡಿಕೆ ಖರೀದಿ ಗುರಿಕ್ಯಾಂಪ್ಕೊ ಸಂಸ್ಥೆ ಅಡಿಕೆ ಬೆಳೆಗಾರರ ಹಿತಕ್ಕಾಗಿಹುಟ್ಟಿಕೊಂಡು ಮೂರು ರಾಜ್ಯಗಳಲ್ಲಿ ಉತ್ತಮವಾಗಿಕಾರ್ಯಾಚರಿಸುತ್ತಿದೆ. ಅಡಿಕೆಗೆ ನ್ಯಾಯವಾದ ಬೆಲೆಕೊಡಿಸುತ್ತಿದೆ. ಕರಾವಳಿಯ ತೋಟಿಗರು ಕ್ಯಾಂಪ್ಕೋಮುಖಾAತರ ಅಡಿಕೆಯನ್ನು ಮಾರಾಟ ಮಾಡಬೇಕು,ಅಲ್ಪಲಾಭಕ್ಕೆ ಸೆಕೆಂಡ್ಸ್ನವರಿಗೆ ಮಾರಬಾರದು.ಸಹಕಾರವನ್ನು ಒಪ್ಪಿ, ಅಪ್ಪಿಕೊಂಡರೆ ಶಾಶ್ವತ ಲಾಭವಿದೆ.ಕರಾವಳಿ ಹಳ್ಳಿಗಳಲ್ಲಿ ಕ್ಯಾಂಪ್ಕೋ ಖರೀದಿ ಕೇಂದ್ರ ತೆರೆದು ಈವರ್ಷ ೧ಲಕ್ಷ ಕ್ವಿಂಟಾಲ್ ಅಡಿಕೆಯನ್ನು ಖರೀದಿಸಲು ಕ್ಯಾಂಪ್ಕೋಬಯಸಿದೆ ಎಂದು ಶಂಭುಲಿಂಗ ಹೆಗಡೆ ಪ್ರಕಟಿಸಿದ್ದಾರೆ.
Leave a Comment