
ಯಲ್ಲಾಪುರ : ಅನಧೀಕೃತವಾಗಿಗಾಂಜಾ ಮಾರಾಟಮಾಡುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಹಳಿಯಾಳ ರಸ್ತೆಯ ಡೋಂಗಿನಾಳ ಬಸ್ ಸ್ಟಾö್ಯಂಡ್ ಸಮೀಪದ ಸಣ್ಣ ಹಳ್ಳದ ಬಳಿ ಶನಿವಾರ ನಡೆದಿದೆ.
ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸುಮಾರು ೧೦,೦೦೦ ರೂ. ಮೌಲ್ಯದ ಮಾರಾಟ ಮಾಡಲು ಇಟ್ಟಿದ್ದ ೩೭೦ ಗ್ರಾಂ ಒಣ ಗಾಂಜಾವನ್ನು ತಹಶೀಲ್ದಾರರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿ ಸಮೇತ ವಶಪಡಿಸಿಕೊಂಡಿದ್ದಾರೆ. ಹಳಿಯಾಳದ ಭಾಗವತಿಯ ಗಂಗಾರಾಮ್ ನಾಗು ಜೋರೆ ಬಂಧಿತ ಆರೋಪಿಯಾಗಿದ್ದು, ೩೭೦ ಗ್ರಾಂ ಗಾಂಜಾ ಹಾಗೂ ೭೩೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಪ್ರಕರಣ ದಾಖಲಾಸಿಕೊಂಡು, ತನಿಖೆ ನಡೆಸಿದ್ದಾರೆ.
[
Leave a Comment