ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಚಾರ, ಪ್ರಸಾರದಿಂದ ನಾಡಿನಲ್ಲಿ ಪ್ರಸಿದ್ಧವಾದ ಸಪ್ತಕ ಸಂಸ್ಥೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಅಪ್ಟೋಬರ್ 3ರಂದು ಸಪ್ತಕ ಸಭಾಂಗಣ ಬೆಂಗಳೂರಿನಲ್ಲಿ ಸಂಗೀತ ಸಾಂಗತ್ಯ ಎಂಬ ಕಾರ್ಯಕ್ರಮ ದಿನವಿಡೀ ನಡೆಯಲಿದ್ದು ಡಾ. ದತ್ತಾತ್ರೇಯ ವೇಲನ್ಕರ್, ಸಮೀರ್ ಕುಲಕರ್ಣಿ, ಕುಮಾರಿ ಹಿರಣ್ಮಯಿ, ಶ್ರೀಮತಿ ಸುಗಂಧಾ ಇವರು ಗಾಯನ ಕಾರ್ಯಕ್ರಮ ನೀಡಲಿದ್ದು ಕಾರ್ತಿಕ್ ಭಟ್ ತಬಲಾ ನುಡಿಸುವರು, ಸುಮಿತ್ ನಾಯ್ಕ, ಯೋಗೇಶ ಭಟ್, ಸೂರ್ಯ ಉಪಾಧ್ಯಾಯ, ಗೌರವ ಗಡಿಯಾರ ಸಾಥ್ ನೀಡುವರು. ಸಪ್ತಕ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲ ಕಲಾವಿದರು ದಿನವಿಡೀ ಉಪಸ್ಥಿತರಿರುತ್ತಾರೆ.

ಅಕ್ಟೋಬರ್ 8 ಶುಕ್ರವಾರ ಸಂಜೆ 4ರಿಂದ ಜಿಲ್ಲೆಯ ಜೋಯ್ಡಾದ ನಂದಿಗದ್ದೆ ಬಯಲುರಂಗದ ಮೇಲೆ ಶಂಕರ ಶಾನುಭೋಗ ಸಂಗೀತಕ್ಕೆ ಗಣೇಶ ಭಾಗ್ವತ್ ತಬಲಾ, ಸತೀಶ ಭಟ್ ಹಾರ್ಮೋನಿಯಂ, ನಾಗರಾಜ ವೈದ್ಯ ಪಖಾವಾಜ್, ಕೌಶಿಕ್ ಭಟ್ ತಾಳ ನುಡಿಸುವರು. ಮೈತ್ರೇಯಿ ಭಟ್ ಗಾಯನಕ್ಕೆ ಕೌಶಿಕ್ ಭಟ್, ಸತೀಶ ಭಟ್ ಹೆಗ್ಗಾರ್ ಹಾರ್ಮೋನಿಯಂ ನುಡಿಸುವರು.
ಅಕ್ಟೋಬರ್ 9ರಂದು ಶಿರ್ಸಿ ಬೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದಲ್ಲಿ ಮಹಿಳೆಯರ ಮತ್ತು ಮಕ್ಕಳ ಯಕ್ಷಗಾನ ನಡೆಯಲಿದ್ದು ನಿರ್ಮಲಾ ಹೆಗಡೆ ಗೋಳಿಕೊಪ್ಪ, ಶ್ರೀಮತಿ ಲತಾ, ಶ್ರೀಮತಿ ಸೌಮ್ಯ, ಕುಮಾರಿ ಸ್ನೇಹಾ, ಕು. ಅಭಿಜ್ಞಾ ಮೊದಲಾದವರು ಪಾಲ್ಗೊಳ್ಳಿದ್ದು ಗಜಾನನ ಭಾಗ್ವತ್, ಶ್ರೀಪಾದ ಭಟ್, ಗಜಾನನ ಹೆಗಡೆ ಇವರ ಹಿಮ್ಮೇಳವಿದೆ.
ಅಕ್ಟೋಬರ್ 31ರಂದು ಸಪ್ತಕದ 15ನೇ ವಾರ್ಷಿಕೋತ್ಸವ ನಡೆಯಲಿದ್ದು ಚೌಡಯ್ಯ ಸ್ಮಾರಕಭವನದಲ್ಲಿ ಪ್ರವೀಣ ಗೋಡ್ಕಿಂಡಿ, ಜಯತೀರ್ಥ ಮೇವುಂಡಿ ಇವರ ಕೊಳಲು, ಗಾಯನ ಜುಗಲ್ಬಂಧಿ, ರವೀಂದ್ರ ಕಾಟೋಟಿ, ರಾಜೇಂದ್ರ ನಾಕೋಡ ತಬಲಾ ನಡೆಯಲಿದೆ. ಬಾಲ್ಯದಿಂದಲೂ ಸಂಗೀತ, ಸಾಂಸ್ಕøತಿಕ ಪ್ರೀತಿ ಬೆಳೆಸಿಕೊಂಡು 15 ವರ್ಷದ ಹಿಂದೆ ಸಪ್ತಕ ಕಟ್ಟಿ ತಮ್ಮ ಕುಟುಂಬವನ್ನು, ತಮ್ಮನ್ನೂ ಸಂಪೂರ್ಣವಾಗಿ ಸಂಗೀತಕ್ಕೆ ತೊಡಗಿಕೊಂಡ ವಿಶಿಷ್ಟ ವ್ಯಕ್ತಿ ಜಿ.ಎಸ್. ಹೆಗಡೆ ಇವರ ‘ಜೀವನ ಪಥ ನೆನಪಿನ ರಥ’ ಪುಸ್ತಕ ಅಂದು ಬಿಡುಗಡೆಯಾಗಲಿದ್ದು ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕರ್ನಾಟಕ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅಧ್ಯಕ್ಷತೆ ವಹಿಸುವರು. ಜಿಲ್ಲೆಯವರಾದ ಜಿ.ಎಸ್. ಹೆಗಡೆ ಅವರ ಜೀವನ ಪಥದಲ್ಲಿ ಸಂಗೀತದ ರಥ ಬಹುಕಾಲ ಹೀಗೆ ಸಾಗುತ್ತಿರಲಿ ಎಂದು ಹಾರೈಸೋಣ. ತಮಗೆ ಹತ್ತಿರವಿರುವ ಊರಿನ ಕಾರ್ಯಕ್ರಮಕ್ಕೆ ಬನ್ನಿ ಎಂದು ಜಿ.ಎಸ್. ಹೆಗಡೆ ಕಲಾಸಕ್ತರನ್ನು ಕರೆದಿದ್ದಾರೆ.
Leave a Comment